ಸುರತ್ಕಲ್ ಸಂತೆ ಮಾರುಕಟ್ಟೆಯ ಸಭೆ
ಸುರತ್ಕಲ್,ಎ.16: ಇಲ್ಲಿನ ಸಂತೆ ಮಾರುಕಟ್ಟೆಗೆ ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಶಾಸಕ ಬಿ.ಎ. ಮೊಯ್ದಿನ್ ಬಾವ ಹೇಳಿದರು.
ಸುರತ್ಕಲ್ ಸಂತೆ ಮಾರುಕಟ್ಟೆಯ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ವರ್ತಕರು ಇನ್ನು ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ. ಅವರ ಕಾಳಜಿ ಸರಕಾರಕ್ಕೆ ಇದೆ. ಈ ಬಗ್ಗೆ ಸೂಕ್ತ ನಿರ್ಧಾರ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇಂಟಕ್ ಜಿಲ್ಲಾಧ್ಯಕ್ಷ ಮನೋಹರ್ ಶೆಟ್ಟಿ ಮಾತನಾಡಿ, ಸಂತೆಯಲ್ಲಿ ವ್ಯಾಪಾರ ಮಾಡಿ ಜೀವನ ನಡೆಸುವ ವ್ಯಾಪಾರಿಗಳಿಗೆ ವಿನಾ ಕಾರಣ ಕಿರುಕುಳ ನೀಡವುದನ್ನು ಸಹಿಸಲಾಗದು. ವ್ಯಾಪಾರ ಮಾಡಿ ಬದುಕುವ ವ್ಯಾಪಾರಿಗಳಿಗೆ ಸವಲತ್ತು ನೀಡುವುದಕ್ಕೆ ಸ್ಥಳೀಯಾಡಳಿತ ಯೋಜನೆ ರೂಪಿಸಬೇಕು ಎಂದು ಮನವಿ ಮಾಡಿದರು.
ಮನಪಾ ಸದಸ್ಯೆ ಪ್ರತಿಭಾ ಕುಳಾಯಿ, ಗುಣಕರ ಶೆಟ್ಟಿ, ಮಾಜಿ ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ಇಂಟಕ್ ಜಿಲ್ಲಾ ಕಾರ್ಯದರ್ಶಿ ಚಿತ್ತರಂಜನ್, ಮಾರುಕಟ್ಟೆಯ ಅಧ್ಯಕ್ಷ ಅಬೂಬಕರ್, ಕಾರ್ಯದರ್ಶಿ ಮೊಯಿದಿನ್, ವೆಂಕಪ್ಪ, ಜತೆ ಕಾರ್ಯದರ್ಶಿ ಖಾದರ್, ಬಿ. ಮುಹಮ್ಮದ್ ಉಪಸ್ಥಿತರಿದ್ದರು





