ಲಾರಿ ಢಿಕ್ಕಿ: ಬೈಕ್ ಸವಾರ ಸಾವು
ಸೊರಬ, ಎ.16: ಬೈಕ್‌ಗೆ ಲಾರಿ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲೂಕಿನ ಶಿಗ್ಗಾ ಗ್ರಾಮದಲ್ಲಿ ನಡೆದಿದೆ.
ಮೃತಪಟ್ಟವರನ್ನು ಶಿಗ್ಗಾ ಗ್ರಾಮದ ನಾಗರಾಜ್(42) ಎಂದು ಗುರುತಿಸಲಾಗಿದೆ. ಸೊರಬ ಹಾಗೂ ಶಿರಾಳಕೊಪ್ಪ ಸಂಪರ್ಕ ರಸ್ತೆಯಾಗಿರುವ ಶಿಗ್ಗಾ ಮುಖ್ಯ ರಸ್ತೆಯ ತೋಟವೊಂದರ ಕೆರೆಯ ತಿರುವಿನಲ್ಲಿ ಘಟನೆ ಸಂಭವಿಸಿದ್ದು, ಲಾರಿ ಚಾಲಕ ಪರಾರಿಯಾಗಿದ್ದಾನೆ. ಈ ಸಂಬಂಧ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲಾರಿ -ಬೈಕ್ ಢಿಕ್ಕಿ: ಇಬ್ಬರಿಗೆ ಗಂಭೀರ ಗಾಯ
ಭಟ್ಕಳ, ಎ.16: ಲಾರಿ ಮತ್ತು ಬೈಕ್ ನಡುವೆ ಢಿಕ್ಕಿ ಸಂಭವಿಸಿ ಬೈಕ್ ಸವಾರರಿಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಶನಿವಾರ ಸಂಜೆ ತಾಲೂಕಿನ ವೆಂಕಟಾಪುರ ಐಸ್ ಫ್ಯಾಕ್ಟರಿ ಬಳಿ ನಡೆದಿದೆ.
ಘಟನೆ ುಲ್ಲಿ ಗಾಯಗೊಂಡವರನ್ನು ಹಾಡುವಳ್ಳಿಯ ಶ್ರೀಧರ್ ಸೋಮಯ್ಯ ಗೊಂಡ(27), ಕೃಷ್ಣ ಅಣ್ಣಪ್ಪಗೊಂಡ(28) ಎಂದು ಗುರುತಿಸಲಾಗಿದೆ. ಇವರು ಐಸ್ ಫ್ಯಾಕ್ಟರಿಯ ಬಳಿಯ ಮನೆಯೊಂದರ ಕೆ ಲಸ ಮುಗಿಸಿ ಹಾಡುವಳ್ಳಿಗೆ ಬೈಕ್‌ನಲ್ಲಿ ತೆರಳುವಾಗ ನೂತನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮೀನು ಸಾಗಾಟದ ಲಾರಿಯೊಂದು ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಗಾಯಾಳುಗಳನ್ನು ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರಕ್ಕೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.





