ಪೋಪ್ ಈಸ್ಟರ್ ಸಂದೇಶ..!
ವಿಶ್ವದ ಜನತೆಗೆ ಈಸ್ಟರ್ ಹಬ್ಬದ ಸಂದೇಶ ನೀಡಿರುವ ಪೋಪ್ ಫ್ರಾನ್ಸಿಸ್ ಅವರು ಸಿರಿಯದಲ್ಲಿ ಭಯಾನಕತೆ ಹಾಗೂ ಮೃತ್ಯುವಿನ ರುದ್ರನರ್ತನವನ್ನು ಕೊನೆಗೊಳಿಸುವಂತೆ ಕರೆ ನೀಡಿದ್ದಾರೆ. ಈಸ್ಟರ್ ಹಬ್ಬದ ದಿನವಾದ ರವಿವಾರ ವ್ಯಾಟಿಕನ್‌ನಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಿದ ಬಳಿಕ ಸೈಂಟ್‌ಪೀಟರ್ಸ್ ಚೌಕದಲ್ಲಿ ನೆರೆದಿದ್ದ ಲಕ್ಷಾಂತರ ಮಂದಿಯನ್ನು ಉದ್ದೇಶಿಸಿ ಮಾತನಾಡಿದ ಪೋಪ್, ಸಿರಿಯದ ನಾಗರಿಕರಿಗೆ ಸಾಂತ್ವನ ಹಾಗೂ ನೆಮ್ಮದಿಯನ್ನುಂಟು ಮಾಡಲು ನಡೆಯುತ್ತಿರುವ ಎಲ್ಲಾ ಪ್ರಯತ್ನಗಳನ್ನು ಕಾಪಾಡಿಕೊಂಡು ಹೋಗುವಂತೆ ಕರೆ ನೀಡಿದ್ದಾರೆ.
Next Story





