ಪಟ್ಟಭದ್ರ ಹಿತಾಸಕ್ತಿಗಳ ಹುನ್ನಾರದಿಂದಾಗಿ ದಕ್ಷಿಣ ಕನ್ನಡ ಹಿಂದುಳಿದಿದೆ: ಕುಮಾರಸ್ವಾಮಿ
ಹಝ್ರತ್ ಶೈಖ್ ಮಹಮೂದ್ ವಲಿಯುಲ್ಲಾಹ್ ಅಡ್ಕಾ ಉರೂಸ್

ಸುರತ್ಕಲ್, ಎ.16: ಹಝ್ರತ್ ಶೈಖ್ ಮಹಮೂದ್ ವಲಿಯುಲ್ಲಾಹ್ ಅಡ್ಕಾ ಉರೂಸ್, ನವೀಕೃತ ಗೌಸಿಯಾ ಮಸೀದಿ ಹಾಗೂ ದರ್ಗಾ ಕಟ್ಟಡ ಉದ್ಘಾಟನಾ ಸಮಾರಂಭದ ಎರಡನೇ ದಿನದ ಧಾರ್ಮಿಕ ಪ್ರವಚನದ ಕಾರ್ಯಕ್ರಮವು ರವಿವಾರ ದರ್ಗಾ ವಠಾರದಲ್ಲಿ ನಡೆಯಿತು
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರ ಸ್ವಾಮಿ, ರಾಜ್ಯದಲ್ಲಿ ಬೆಂಗಳೂರು ಬಳಿಕ ಮಂಗಳೂರು ಅಭಿವೃದ್ಧಿ ಹೊಂದುತ್ತಿರುವ ಪ್ರದೇಶ. ಇಲ್ಲಿ ಲಕ್ಷಾಂತರ ಉದ್ಯೋಗಗಳ ಸೃಷ್ಟಿ ಯಾಗುತ್ತಿದೆ. ಆದರೆ, ಕೆಲವೊಂದು ಪಟ್ಟಭದ್ರ ಹಿತಾಸಕ್ತಿಗಳ ಹುನ್ನಾರದಿಂದಾಗಿ ದ.ಕ. ಹಿಂದುಳಿಯುವಂತಾಗಿದೆ ಎಂದು ಹೇಳಿದರು.
ಬೈಕಂಪಾಡಿ ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಹೈದರ್ ಅಲಿ ಸಖಾಫಿ ದುಆ ನೆರವೇರಿಸಿದರು. ಹಾಫಿಲ್ ಕಬೀರ್ ಬಾಖವಿ ಕೊಲ್ಲಂ ಮುಖ್ಯ ಭಾಷಣಗೈದರು. ಮಂಗಳೂರು ಉತ್ತರ ವಲಯ ಕ್ಷೇತ್ರ ಶಾಸಕ ಮೊಯ್ದಿನ್ ಬಾವ ಕಾರ್ಯಕ್ರಮ ಉದ್ಘಾಟಿಸಿದವರು.
ಬೈಕಂಪಾಡಿ ಮುಹಿಯುದ್ದಿನ್ ಜುಮಾ ಮಸೀದಿಯ ಅಧ್ಯಕ್ಷ ಬಿ.ಎ. ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಅಧ್ಯಕ್ಷತೆಯನ್ನು ವಹಿಸಿದ್ದರು. ಸಜಿಪ ನಡು ಕೇಂದ್ರ ಜುಮಾ ಮಸೀದಿಯ ಖತೀಬ್ ಅಶ್ಫಾಕ್ ಪೈಝಿ ನಂದಾವರ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಸಂಸದ ಸಿ.ಎಸ್. ಪುಟ್ಟರಾಜು, ಶಾಸಕ ಡಿ.ಬಿ. ನಿಂಗಯ್ಯ, ರಾಜ್ಯ ಜೆಡಿಎಸ್ ಮಹಾ ಪ್ರಧಾನ ಕಾರ್ಯದರ್ಶಿ, ಫಿಝಾ ಡೆವಲಪರ್ಸ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಬಿ.ಎಂ.ಫಾರೂಕ್, ಕಾಟಿಪಳ್ಳ ಮಿಸ್ಬಾ ಮಹಿಳಾ ಕಾಲೇಜಿನ ಚೇರ್‌ಮ್ಯಾನ್ ಮುಮ್ತಾಝ್ ಅಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಡೆಕ್ಕನ್ ಪ್ಯಾಕೇಜಿಂಗ್ ಇಂಡಿಯಾ ಪ್ರೈ.ಲಿ.ನ ಮಾಲಕ ಹಾಜಿ ಅಸ್ಗರ್ ಅಲಿ, ವಿಶ್ವಾಸ್ ಬಾವ ಬಿಲ್ಡರ್ಸ್‌ನ ಅಬ್ದುರ್ರವೂಪ್ ಪುತ್ತಿಗೆ, ಮುಕ್ಕ ಸೀ ಫುಡ್ಸ್ ನ ಮಾಲಕ ಹಾರಿಸ್, ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯ ಯು.ಟಿ. ಇಫ್ತಿಕಾರ್, ಅಲ್ ಮುಝೈನ್ ಸೌದಿ ಅರೇಬಿಯಾದ ಝಕರಿಯಾ ಜೋಕಟ್ಟೆ, ಮಂಗಳೂರು ಇನ್‌ಲ್ಯಾಂಡ್ ಬಿಲ್ಡರ್ಸ್ ನ ಸಿರಾಜ್ ಅಹ್ಮದ್, ಎಕ್ಸ್‌ಪ್ರಟೈಸ್ ಅಲ್ ಜುಬೈಲ್‌ನ ಅಶ್ಫಾಕ್ ಕರ್ನಿರೆ, ಹಾಜಿ ನಝೀರ್ ಹುಸೈನ್ ಕಾಟಿಪಳ್ಳ, ಶರೀಫ್ ಜೋಕಟ್ಟೆ, ಉಳ್ಳಾಲ ಸೈಯದ್ ಮದನಿ ದರ್ಗಾ ಮತ್ತು ಕೆಂದ್ರ ಜುಮಾ ಮಸೀದಿಯ ಕಾರ್ಯದರ್ಶಿ ಮುಹಮ್ಮದ್ ತ್ವಾಹ ಹಾಜಿ, ಟೇಬಲ್ ಫಾರ್ ಗ್ರೂಪ್ ಅಲ್ ಜುಬೈಲ್‌ನ ಮುಹಮ್ಮದ್ ಮುಬೀನ್, ಓಶಿಯನ್ ಕನ್‌ಸ್ಟ್ರಕ್ಷನ್‌ನ ಇನಾಯತ್ ಅಲಿ ಮುಲ್ಕಿ, ವಾಮಂಜೂರು ಪ್ಯಾನೆಲ್ಸ್‌ನ ಮಾಲಕ ಅರ್ಶದ್, ಎಕ್ಯುರೇಟ್ ಫ್ಲೈವುಡ್ ಮಾಲಕ ಖಾಲಿದ್, ಆಝಾದ್ ಹಾರ್ಡ್‌ವೇರ್ಸ್‌ನ ಮಾಲಕ ಮನ್ಸೂರ್ ಅಹ್ಮದ್, ಗೋಲ್ಡನ್ ಟ್ರೇಡರ್ಸ್‌ನ ಶರೀಫ್, ಹೈಸೂಮ್ ಸ್ಟೀಲ್‌ನ ಮಾಲಕ ಶಾಕಿರ್, ಎ.1 ಪಿಡಬ್ಲುಡಿ ಕಂಟ್ರಾಕ್ಟರ್ ಎ.ಎಚ್. ಅಬ್ದುಲ್ ಖಾದರ್, ಮುಹಮ್ಮದ್ ಶರೀಫ್ ಮಣಿಪಾಲ, ಫಾಲ್ಕನ್ ಸ್ಟೀಲ್ ಕಾರ್ಪೊರೇಶನ್‌ನ ಮಾಲಕ ಹಕೀಮ್, ವಿಶ್ವಾಸ್ ಎಸ್ಟೇಟ್‌ನ ಸುಲೈಮಾನ್ ಶೇಕ್ ಬೆಳುವಾಯಿ, ಹೋಮ್ ಪ್ಲಸ್ ಫರ್ನಿಚರ್‌ನ ಆಸಿಫ್ ಸುಫ್ಯಾನ್, ರಜಾನ್ ಸೂಪರ್ ಮಾರ್ಕೆಟ್‌ನ ಸೌದಿ ಅರೇಬಿಯಾದ ಮಾಲಕ ಅಶ್ರಫ್ ಅಂಗರಗುಂಡಿ, ದ.ಕ. ಯುವ ಕಾಂಗ್ರೆಸ್‌ನ ಕಾರ್ಯದರ್ಶಿ ಸುಹೈಲ್ ಕಂದಕ್, ನೌಶಾದ್ ಹಾಜಿ ಸೂರಲ್ಪಾಡಿ, ಫರ್ನೀಚರ್ ಮಾಲ್ ಉಡುಪಿಯ ಸಲೀಂ, ಅಂಗರಗುಂಡಿ ಬದ್ರಿಯಾ ಮದ್ರಸ ಸಮಿತಿಯ ಅಧ್ಯಕ್ಷ ಅಡ್ವೋಕೇಟ್ ಬಿ. ಮುಕ್ತಾರ್ ಅಹ್ಮದ್, ಹಮೀದ್ ಕೂಳೂರು, ಹಾಜಿ ಶರೀಫ್, ಮುಕ್ಕ ಮಸೀದಿಯ ಅಧ್ಯಕ್ಷ ಅಬ್ದುಲ್ ರಝಾಕ್, ಹನೀಫ್ ಕುಟ್ಪಾಡಿ, ಇಕ್ಬಾಲ್ ಅಹ್ಮದ್ ಮುಲ್ಕಿ ಮೊದಲಾದವರು ಉಪಸ್ಥಿತರಿದ್ದರು.







