ಎಸ್‌ವೈಎಸ್ ಕೆ.ಸಿ. ರೋಡ್ ಸೆಂಟರ್ ಮಹಾಸಮ್ಮೇಳನ

ಉಳ್ಳಾಲ, ಎ.16: ಎಸ್‌ವೈಎಸ್, ಎಸ್ಸೆಸ್ಸೆಫ್‌ನಂತಹ ಸಂಘಟನೆಯ ಒಡನಾಟದಿಂದ ಧರ್ಮದ ತಳಹದಿಯಲ್ಲಿ ಬದುಕಲು ಸಾಧ್ಯ. ಈ ಮೂಲಕ ಪ್ರವಾದಿಯ ಆದರ್ಶಗಳನ್ನು ಪಾಲಿಸಲು ದಾರಿಯಾಗುತ್ತದೆ ಎಂದು ಎಸ್‌ವೈಎಸ್ ರಾಜ್ಯ ಮುಖಂಡ ಕೆ.ಪಿ.ಹುಸೈನ್ ಸಅದಿ ಕೆ.ಸಿ.ರೋಡ್ ಹೇಳಿದರು.
ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ (ಎಸ್‌ವೈಎಸ್ ) ಇದರ ಸೆಂಟರ್ ಸಮ್ಮೇಳನದ ಪ್ರಯುಕ್ತ ಕೆ.ಸಿ.ನಗರದ ಜಂಕ್ಷನ್‌ನಲ್ಲಿ ರವಿವಾರ ಜರಗಿದ ಎಸ್‌ವೈಎಸ್ ಕೆ.ಸಿ. ರೋಡ್ ಸೆಂಟರ್ ಮಹಾಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಪ್ರಭಾಷಣಕಾರ ಎಮ್ಮೆಸ್ಸೆಂ ಅಬ್ದುರ್ರಶೀದ್ ಝೈನಿ ಅಲ್ ಕಾಮಿಲ್ ಸಖಾಫಿ ಮಾತನಾಡಿ, ಧಾರ್ಮಿಕ, ಆಧ್ಯಾತ್ಮಿಕ, ಸಾಮಾಜಿಕ ಕಾರ್ಯಗಳಲ್ಲಿ ಕೆ.ಸಿ.ರೋಡಿನ ಎಸ್‌ವೈಎಸ್ ಸೆಂಟರ್ ತೊಡಗಿಸಿಕೊಳ್ಳುವ ಮೂಲಕ ಜನರ ಸಂಕಷ್ಟಗಳಿಗೆ ಸಾಂತ್ವನ ಕೇಂದ್ರವಾಗುತ್ತಿವೆ ಎಂದು ಶ್ಲಾಘಿಸಿದರು.
ಸೈಯದ್ ಸಿ.ಟಿ.ಎಂ. ಸಲೀಂ ಅಸ್ಸಖಾಫ್ ತಂಙಳ್ ದುಆ ನೆರವೇರಿಸಿದರು. ಉಮರ್ ಮಾಸ್ಟರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸ್ವಲಾಹುದ್ದೀನ್ ಸಖಾಫಿ ಮಾಡನ್ನೂರು ಮುಖ್ಯ ಪ್ರಭಾಷಣಗೈದರು.
ಎಸ್ ವೈ ಎಸ್ ಜಿಲ್ಲಾಧ್ಯಕ್ಷ ಉಸ್ಮಾನ್ ಸಅದಿ ಪಟ್ಟೋರಿ, ಜಿಲ್ಲಾ ಮುಖಂಡ ಅಶ್ರಫ್ ಕಿನಾರ, ಎಸ್‌ಎಂಎ ಉಳ್ಳಾಲ ವಲಯಾಧ್ಯಕ್ಷ ಅಹಮ್ಮದ್ ಕುಂಞಿ ಹಾಜಿ, ತಲಪಾಡಿ ವಲಯಾಧ್ಯಕ್ಷ ಅಬ್ಬಾಸ್ ಹಾಜಿ, ಎಸ್ಸೆಸ್ಸೆಫ್ ಕೋಟೆಕಾರ್ ಘಟಕದ ಅಧ್ಯಕ್ಷ ಅಬ್ದುಲ್ ಬಾರಿ ಸಅದಿ, ಎಸ್ಸೆಸ್ಸೆಫ್ ತಲಪಾಡಿ ಘಟಕದ ಅಧ್ಯಕ್ಷ ಹ್ಮಾನ್ ಝುಹುರಿ, ಉಚ್ಚಿಲ ಜುಮಾ ಮಸೀದಿಯ ಅಧ್ಯಕ್ಷ ಅಬ್ಬಾಸ್ ಪೆರಿಬೈಲ್, ಸ್ವಾಗತ ಸಮಿತಿಯ ಅಧ್ಯಕ್ಷ ಯು.ಬಿ. ಮುಹಮ್ಮದ್ ಹಾಜಿ, ಕೆ.ಸಿ. ನಗರದ ಅಲ್ ಹುದಾ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ, ಹಸನಬ್ಬ ಹಾಜಿ, ಉಸ್ಮಾನ್ ಕೆ.ಎ., ಎಸ್‌ವೈಎಸ್ ಕೆ.ಸಿ. ರೋಡ್ ಸೆಂಟರ್‌ನ ಕಾರ್ಯದರ್ಶಿ ಉಸ್ಮಾನ್ ಕೆ.ಎ., ತಲಪಾಡಿ ಎಸ್‌ಜೆಎಂ ಅಧ್ಯಕ್ಷ ಇಬ್ರಾಹೀಂ ಮದನಿ ಉಪಸ್ಥಿತರಿದ್ದರು.
ಖತೀಬ್ ಹನೀಫ್ ಸಖಾಫಿ ಸ್ವಾಗತಿಸಿದರು. ಎಸ್‌ವೈಎಸ್ ಜತೆ ಕಾರ್ಯದರ್ಶಿ ಫಾರೂಕ್ ಕೋಟೆಪುರ ವಂದಿಸಿದರು.







