34 ನೆಕ್ಕಿಲಾಡಿಯಲ್ಲಿ ಬುರ್ದಾ ಮಜ್ಲಿಸ್

ಉಪ್ಪಿನಂಗಡಿ, ಎ.17: ಇಲ್ಲಿನ 34 ನೆಕ್ಕಿಲಾಡಿ ಉಮರುಲ್ ಫಾರೂಕ್ ಜುಮಾ ಮಸೀದಿಯ ಆಡಳಿತ ಸಮಿತಿ ಮತ್ತು ಇರ್ಷಾದುಲ್ ಮುಸ್ಲಿಮೀನ್ ವೆಲ್ಫೇರ್ ಅಸೋಸಿಯೇಶನ್ ಇವುಗಳ ಜಂಟಿ ಆಶ್ರಯದಲ್ಲಿ ಮರ್ಹೂಮ್ ಅಝೀಮ್ ವೇದಿಕೆಯಲ್ಲಿ ಬೃಹತ್ ಬುರ್ದಾ ಮಜ್ಲಿಸ್ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಸಭಾ ಕಾರ್ಯಕ್ರಮವನ್ನು ಮಸೀದಿಯ ಆಡಳಿತ ಸಮಿತಿಯ ಅಧ್ಯಕ್ಷ ಕೆ.ಮುಹಮ್ಮದ್ ಹಾಜಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಇರ್ಶಾದುಲ್ ಮುಸ್ಲಿಮೀನ್ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷ ಹಾಜಿ ಇಸ್ಮಾಯೀಲ್ ಮೇದರಬೆಟ್ಟು ವಹಿಸಿದ್ದರು. ಸ್ಥಳೀಯ ಖತೀಬ್ ಇಬ್ರಾಹೀಂ ಸಅದಿ ಅಲ್ ಅಫ್ಳಲಿ ದುವಾಶೀರ್ವಚನಗೈದರು.
ಮುಖ್ಯ ಅತಿಥಿಗಳಾಗಿ ಮಸೀದಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಜಿ ಎನ್.ಶೇಕಬ್ಬ, ಉಪಾಧ್ಯಕ್ಷ ಸಿದ್ದೀಕ್ ಹಾಜಿ ಅರಫಾ, ಕೋಶಾಧಿಕಾರಿ ಹಾಜಿ ಹಸೈನಾರ್ ಉಪಸ್ಥಿತರಿದ್ದರು.
ವೆಲ್ಫೇರ್ ಅಸೋಯೇಶನ್ ಗೌರವಾಧ್ಯಕ್ಷ ಹಾಜಿ ಇಬ್ರಾಹೀಂ ಅಗ್ನಾಡಿ, ಕಾರ್ಯಕ್ರಮದ ಸಂಚಾಲಕ ಇಸ್ಹಾಕ್ ಹಾಜಿ ಮೇದರಬೆಟ್ಟು, ಸ್ಥಳೀಯ ಗ್ರಾಪಂ ಉಪಾಧ್ಯಕ್ಷ ಅಸ್ಗರ್ ಅಲಿ ಮೇದರಬೆಟ್ಟು, ಮುಹಿಯುದ್ದೀನ್ ಮದ್ರಸ ಸಮಿತಿಯ ಅಧ್ಯಕ್ಷ ಅಮೀರ್ ಜಾನ್ ಸಾಬ್, ಹಿರಿಯ ಸದಸ್ಯ ಆದಂಕುಂಞಿ ಹಾಜಿ, ಕುವ್ವತುಲ್ ಇಸ್ಲಾಮ್ ಮದ್ರಸದ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮುಹಮ್ಮದ್ ಅಜ್ಮಲ್, ಸೌದಿ ಅರೇಬಿಯದ ನಮ್ಮ ಜಮಾಅತ್ ಸಮಿತಿಯ ಪ್ರತಿನಿಧಿಗಳಾದ ಸಲೀಮ್ ಜಾವೇದ್, ಫಯಾಝ್ ಎನ್., ಮದ್ರಸ ಅಧ್ಯಾಪಕರಾದ ಕಬೀರ್ ಸಅದಿ, ಅಝೀಝ್ ದಾರಿಮಿ, ದ.ಕ. ಬಸ್ಸು ಮಾಲಕರ ಸಂಘದ ಅಧ್ಯಕ್ಷ ಅಬ್ದುಲ್ ಅಝೀಝ್ ಪರ್ತಿಪ್ಪಾಡಿ, ಮಸೀದಿ ಸಮಿತಿಯ ಅಬ್ದುಲ್ ಖಾದರ್ ಸಂತೆಕಟ್ಟೆ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇತ್ತೀಚೆಗೆ ವರದಕ್ಷಿಣೆರಹಿತ ಸರಳ, ಮಾದರಿ ವಿವಾಹ ನಡೆಸಿದ ಸ್ಥಳೀಯ ಯುವಕ ಮುಹಮ್ಮದ್ ಮುಸ್ತಫಾ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ವೆಲ್ಫೇರ್ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಝಕರಿಯ ಕೊಡಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ರಹ್ಮಾನ್ ಯುನಿಕ್ ಸ್ವಾಗತಿಸಿದರು. ಇಬ್ರಾಹೀಂ ಅಗ್ನಾಡಿ ವಂದಿಸಿದರು.
ಬುರ್ದಾ ಮಜ್ಲಿಸ್ ಆಲಾಪನೆಯನ್ನು ಜಾಫರ್ ಸಅದಿ ಪಳ್ಳತ್ತೂರು, ಸಲೀಂ ಖಾದ್ರಿ ಹಾಗೂ ಮಾಸ್ಟರ್ ಶಮಾಸ್ ಮಂಗಳೂರು ಅವರನ್ನೊಳಗೊಂಡ ಮಿಶ್ಖಾತುಲ್ ಮದೀನಾ ಬುರ್ದಾ ತಂಡವು ನಡೆಸಿಕೊಟ್ಟಿತು.







