ಮಲಪ್ಪುರಂ ಉಪ ಚುನಾವಣೆ : ಯುಡಿಎಫ್ ಅಭ್ಯರ್ಥಿ ಪಿ.ಕೆ.ಕುಂಞಾಲಿಕುಟ್ಟಿಗೆ ಜಯ

ಮಲಪ್ಪುರಂ, ಎ.17: ಮಲಪ್ಪುರಂ ಲೋಕಸಭಾ ಕ್ಷೇತಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಭ್ಯರ್ಥಿ ಹಾಗೂ ಮಾಜಿ ಸಚಿವ ಪಿ.ಕೆ.ಕುಂಞಾಲಿಕುಟ್ಟಿ ಭರ್ಜರಿ ಗೆಲುವು ದಾಖಲಿಸಿದ್ದಾರೆ
ಎಲ್ ಡಿಎಫ್ ನೇತೃತ್ವದ ಸಿಪಿಎಂನ ಎಂಬಿ ಫೈಸಲ್ ವಿರುದ್ಧ ಐಯುಎಂಎಲ್ ಅಭ್ಯರ್ಥಿ ಕುಂಞಲಿಕುಟ್ಟಿ 1,71,023 ಮತಗಳ ಅಂತರದಲ್ಲಿ ಜಯ ಗಳಿಸಿದ್ದಾರೆ. ಬಿಜೆಪಿಯ ಎನ್.ಶ್ರೀಪ್ರಕಾಶ್ ಮತ್ತು ಆರು ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದರು.
ಐಯುಎಂಎಲ್ ನ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಕೇಂದ್ರ ಸಚಿವ ಇ. ಅಹ್ಮದ್ ನಿಧನರಾದ ಹಿನ್ನೆಲೆಯಲ್ಲಿ ತೆರವಾದ ಮಲಪ್ಪುರಂ ಲೋಕಸಭಾ ಸ್ಥಾನಕ್ಕೆ ಉಪಚುನಾವಣೆ ಕಳೆದ ಎ.12ರಂದು ನಡೆಸಲಾಗಿತ್ತು.
ಪಡೆದಿರುವ ಪತಗಳ ವಿವರ
1 ಪಿ.ಕೆ.ಕುಂಞಾಲಿಕುಟ್ಟಿ(ಐಯುಎಂಎಲ್) 5,15,330
2 ಎಂಬಿ ಫೈಸಲ್ ( ಸಿಪಿಐ(ಎಂ)) 3,44,307
3 ಶ್ರೀಪ್ರಕಾಶ್ (ಬಿಜೆಪಿ) 65,675
4 ಪಿ.ಪಿ.ಎ ಸಗೀರ್ (ಪಕ್ಷೇತರ) 1,469
5 ಕುಂಞಾಲಿಕುಟ್ಟಿ ಕುಲುಂಬೈಲ್ (ಪಕ್ಷೇತರ) 720
6 ಮುಹಮ್ಮದ್ ಮುಸ್ಲಿಯಾರ್ (ಪಕ್ಷೇತರ) 445
7 ಮುಹಮ್ಮದ್ ಫೈಸಲ್ (ಪಕ್ಷೇತರ) 1,698
8 ಎ.ಕೆ.ಶಾಜಿ (ಪಕ್ಷೇತರ) 565
9 ಕೆ.ಶಾಜಿಮೊನ್ (ಪಕ್ಷೇತರ) 1,027
ನೋಟಾ 4,098
ಅಸಿಂಧು ಮತಗಳು 657
ಗೆಲುವಿನ ಅಂತರ 1,71,023 ಮತಗಳು







