1990ರ ಮೊದಲು ಅಯೋಗ್ಯರಿಗೆ ಭಾರತ ರತ್ನಸಿಗುತ್ತಿತ್ತು: ಬಿಜೆಪಿ ಸಂಸದನ ವಿವಾದಾತ್ಮಕ ಹೇಳಿಕೆ

ಹೊಸದಿಲ್ಲಿ, ಎ. 17: ಬಿಜೆಪಿಯ ಮಧ್ಯಪ್ರದೇಶದ ಸಂಸದ ಲಕ್ಷ್ಮಿನಾರಾಯಣ ಯಾದವ್‌ರು "1990ಕ್ಕಿಂತ ಮೊದಲು ಅಯೋಗ್ಯರಿಗೆ ಭಾರತ ರತ್ನ ಪ್ರಶಸ್ತಿ ನೀಡಲಾಗುತ್ತಿತ್ತು" ಎಂದು ಹೇಳಿ ವಿವಾದ ಸೃಷ್ಟಿಸಿದ್ದಾರೆ. ದೊಡ್ಡ ಅಯೋಗ್ಯರು ಬಹಳ ಬೇಗನೆ ಭಾರತ ರತ್ನ ಪಡೆದುಕೊಳ್ಳುತ್ತಿದ್ದರು. ಅಂಬೇಡ್ಕರ ಜಯಂತಿ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಅವರು ಮಾತಾಡುತ್ತಿದ್ದರು. ಅಂಬೇಡ್ಕರ್‌ರಿಗೆ ಜಾತೀವಾದಿ ಮಾನಸಿಕತೆಯಿಂದ ಅನ್ಯಾಯವಾಗಿದೆ ಎಂದು ಹೇಳಲು ಪ್ರಯತ್ನಿಸಿ, ಲಕ್ಷ್ಮಿನಾರಾಯಣರು 1990ಕ್ಕಿಂತ ಮೊದಲು ಭಾರತ ರತ್ನ ಪಡೆದವರೆಲ್ಲ ಬದ್ಮಾಶ್‌ಗಳೆಂದು ಹೇಳಿ ಬಿಟ್ಟಿದ್ದಾರೆ. ಬಾಬಾಸಾಹೇಬ್ ಅಂಬೆಡ್ಕರ್‌ರನ್ನು ಪುರಸ್ಕರಿಸಿದ್ದಕ್ಕೆ ಅಂದಿನ ಪ್ರಧಾನಿ ವಿಪಿಸಿಂಗ್‌ರನ್ನು ಅವರುಈಸಂದರ್ಭದಲ್ಲಿ ಹೊಗಳಿದ್ದಾರೆ.
ಅಯೋಗ್ಯಜನರಿಗೆ ಸರ್ವೋಚ್ಚ ಪ್ರಶಸ್ತಿ ಕೊಡುವ ಪ್ರಕ್ರಿಯೆ ಅಂಬೇಡ್ಕರ್‌ರಿಗೆ ಪ್ರಶಸ್ತಿ ನೀಡಿದ ಬಳಿಕ ಸ್ಥಗಿತವಾಯಿತು ಎಂದು ಯಾದವ್ ಹೇಳಿದರು. ಈ ಕುರಿತು ಅವರನ್ನು ಸಂಪರ್ಕಿಸಿದಾಗ ತನ್ನ ಮಾತುಗಳನ್ನು ವೀಡಿಯೊದಲ್ಲಿ ತಿರುಚಲಾಗಿದೆ ಎಂದಿದ್ದಾರೆ. ನಂತರ ಅದುನಾಲಿಗೆಯಿಂದಾದ ಪ್ರಮಾದ ಎಂದುಹೇಳಿದ್ದು, ಸ್ವಲ್ಪ ವಿವಾದಾತ್ಮಕವಾಗಿ ಇದ್ದರೆ ಒಳ್ಳೆದು ಎಂದು ಅಭಿಪ್ರಾಯ ಪ್ರಕಟಿಸಿದ್ದಾರೆ. ತನ್ನ ಹೇಳಿಕೆ ಕುರಿತು ಬೇರೆ ರೀತಿ ಪ್ರತಿಕ್ರಿಯೆ ವ್ಯಕ್ತಪಡಿಸಿದ ಲಕ್ಷ್ಮಿನಾರಾಯಣ ಯಾದವ್‌ರು ತಾನು ಕೇವಲ ಭಾರತ ರತ್ನ ಪ್ರಶಸ್ತಿಯ ಬಗ್ಗೆ ಹೇಳಿದ್ದಲ್ಲ , ಪದ್ಮಭೂಷಣ, ಬೇರೆ ಬೇರೆ ಪ್ರಶಸ್ತಿಗಳ ಬಗ್ಗೆ ಹೇಳಿದ್ದೇನೆ ಎನ್ನುವ ಸ್ಪಷ್ಟೀಕರಣ ನೀಡಿದ್ದಾರೆ.
ಲಕ್ಷ್ಮಿನಾರಾಯಣರ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ, ಅವರ ಹೇಳಿಕೆಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಅದು ಅವರ ವೈಯಕ್ತಿಕ ಅಭಿಪ್ರಾಯ ಎಂದಿದೆ. 1990ಕ್ಕಿಂತ ಮೊದಲು ಸಿ.ರಾಜಗೋಪಾಲಾಚಾರಿ, ಪಂಡಿತ್ ಜವಾಹರಲಾಲ್ ನೆಹರೂ, ಭಗವಾನ್ ದಾಸ್, ಎಮ್ ವಿಶ್ವೇಶ್ವರಯ್ಯ, ಗೋವಿಂದ ವಲ್ಲಭ ಪಂತ್, ಡಿಕೆ ಕಾರ್ವೇ, ಬಿಸಿರಾಯ್, ಪಿಡಿ ಟಂಡನ್, ಡಾ. ರಾಜೇಂದ್ರ ಪ್ರಸಾದ್, ಝಾಕಿರ್ ಹುಸೈನ್, ಪಿವಿ ಕಾನೆ, ಲಾಲ್‌ಬಹದ್ದೂರ್ ಶಾಸ್ತ್ರಿ, ಇಂದಿರಾಗಾಂಧಿ, ವಿವಿಗಿರ, ಕೆ.ಕಾಮರಾಜ್, ಮದರ್ ತೆರೆಸಾ,ವಿನೊಬಾ ಭಾವೆ, ಖಾನ್ ಅಬ್ದುಲ್ ಗಫ್ಫಾರ್ ಖಾನ್ ಮತ್ತು ಎಂಜಿ ರಾಮಚಂದ್ರನ್ ಮುಂತಾದವರಿಗೆ ಭಾರತ ರತ್ನ ಪ್ರಶಸ್ತಿನೀಡಿ ಗೌರವಿಸಲಾಗಿತ್ತು.







