ಮಂಗಳೂರು: "ಪಂಜಾಬ್ ದಾ ಪಿಂಡ್ ರೆಸ್ಟೋರೆಂಟ್"ನಲ್ಲಿ ಅಂತಾರಾಷ್ಟ್ರೀಯ ಬಿರಿಯಾನಿ ಉತ್ಸವ

ಮಂಗಳೂರು, ಎ.17: ನಗರದ "ಪಂಜಾಬ್ ದಾ ಪಿಂಡ್ ರೆಸ್ಟೋರೆಂಟ್" ಅಂತಾರಾಷ್ಟ್ರೀಯ ಬಿರಿಯಾನಿ ಉತ್ಸವವೊಂದನ್ನು ಆಯೋಜಿಸಿದ್ದು, ಒಂದು ತಿಂಗಳಾದ್ಯಂತ ನಡೆಯಲಿರುವ ಈ ಉತ್ಸವ ಎ.1ರಂದು ಆರಂಭಗೊಂಡಿದ್ದು, ಎ.30ರವರೆಗೆ ನಡೆಯಲಿದೆ.
ಮಂಗಳೂರಿನ ಕೆ.ಎಸ್.ರಾವ್ ರಸ್ತೆಯಲ್ಲಿನ ಕೆಬಿಸಿ ಮತ್ತು ಹೋಟೆಲ್ ಲಕ್ಷ್ಮಿ ಮಹಲ್ ಎದುರಿರುವ ಎಕ್ಸೆಲ್ ಮಿಸ್ಚೀಫ್ ಮಾಲ್ ನ 3ನೇ ಮಹಡಿಯಲ್ಲಿರುವ "ಪಂಜಾಬ್ ದಾ ಪಿಂಡ್ ರೆಸ್ಟೋರೆಂಟ್"ನಲ್ಲಿ ಬಿರಿಯಾನಿ ಉತ್ಸವದ ಅಂಗವಾಗಿ ಮಧ್ಯಾಹ್ನ 12 ಗಂಟೆಯಿಂದ 3:30ರವರೆಗೆ ಮಧ್ಯಾಹ್ನದ ಊಟ ಹಾಗೂ ರಾತ್ರಿ 7 ಗಂಟೆಯಿಂದ 11ರವರೆಗೆ ರಾತ್ರಿಯ ಭೋಜನ ಲಭ್ಯವಾಗಲಿದೆ.
ಈ ಬಿರಿಯಾನಿ ಉತ್ಸವದ ಎ ಲಾ ಕಾರ್ಟ ಮೆನುವಿನಲ್ಲಿ 15 ವಿಶಿಷ್ಟ ಸ್ವಾದದ ಬಿರಿಯಾನಿಗಳಾದ ಫಿಲಿಪಿನೋ ಬಿರಿಯಾನಿ (ಫಿಲಿಪ್ಪೈನ್ಸ್), ಪನಂಗ್ ಬಿರಿಯಾನಿ (ಥಾಯ್ಲೆಂಡ್), ಜಮೈಕನ್ ಬಿರಿಯಾನಿ, ಕೊರಿಯನ್ ಬಿರಿಯಾನಿ, ಮಲೇಷ್ಯನ್ ಬಿರಿಯಾನಿ ಹಾಗೂ ಸಿಂಗಾಪುರ ಬಿರಿಯಾನಿ ಗ್ರಾಹಕರಿಗೆ ಲಭ್ಯವಿದೆ. ಇವುಗಳ ಹೊರತಾಗಿ ದೇಶೀಯ ಜನಪ್ರಿಯ ಬಿರಿಯಾನಿಗಳಾದ ಕಶ್ಮೀರಿ ಬಿರಿಯಾನಿ, ಲಕ್ನೌವಿ ಬಿರಿಯಾನಿ ಮತ್ತು ಬಾಂಬೆ ಬಿರಿಯಾನಿ ಸಹಿತ ಸ್ಥಳೀಯ ಸ್ವಾದಿಷ್ಟ ಪುಲಿಮುಂಚಿ ಬಿರಿಯಾನಿ, ಭಟ್ಕಳಿ ಬಿರಿಯಾನಿ, ಕೊಂಕಣಿ ಬಿರಿಯಾನಿ ಮತ್ತು ಘೀ ರೋಸ್ಟ್ ಬಿರಿಯಾನಿ ಕೂಡ ಲಭ್ಯವಿದೆ.
ಅಂತಾರಾಷ್ಟ್ರೀಯ ಬಿರಿಯಾನಿ ಉತ್ಸವವೊಂದು ಮಂಗಳೂರಿನಲ್ಲಿ ಆಯೋಜಿಸಲಾಗುತ್ತಿರುವುದು ಇದೇ ಮೊದಲ ಬಾರಿಯಾಗಿದ್ದು, ನುರಿತ ಪಾಕ ಪ್ರವೀಣರು ಶುದ್ಧ ಸಾಂಬಾರ ಮತ್ತು ಮಸಾಲೆ ಪದಾರ್ಥಗಳನ್ನು ಉಪಯೋಗಿಸಿ ಈ ಸ್ವಾದಿಷ್ಟ ಬಿರಿಯಾನಿಗಳನ್ನು ತಯಾರಿಸುತ್ತಿದ್ದಾರೆ.
ರೆಸ್ಟೋರೆಂಟ್ ನಲ್ಲಿ ಮಾಂಸಾಹಾರಿ ಮತ್ತು ಶಾಖಾಹಾರಿ ಬಿರಿಯಾನಿಗಳೂ ಲಭ್ಯವಿದೆ. ಶಾಖಾಹಾರಿಗಳಿಗೆ ಪನೀರ್, ಮಶ್ರೂಮ್ ಮತ್ತು ಸೋಯಾ ಪದಾರ್ಥಗಳನ್ನು ಉಪಯೋಗಿಸಿದ ಬಿರಿಯಾನಿಯಾದರೆ, ಮಾಂಸಾಹಾರಿಗಳಿಗೆ ಚಿಕನ್, ಮಟನ್, ಮೀನು ಮತ್ತು ಸಿಗಡಿಗಳ ಬಿರಿಯಾನಿ ಲಭಿಸಲಿವೆ. ಆರು ಸ್ವಾದಿಷ್ಟ ಮಾಕ್‌ಟೇಲ್ಸ್ ಗಳಾದ ಮ್ಯಾಂಗೋ ಟ್ಯಾಂಗೊ, ಗಾವಾ ಪಿಂಡ್, ಝೊಂಬೀ ಪುಂಚ್ ಹಾಗೂ ಗೋಲ್ಡನ್ ಗೇಟ್ ಕೂಡ ಮೆನುವಿನ ಭಾಗವಾಗಿವೆ.
ಯುವ ಉದ್ಯಮಿ ಸುರೇಶ್ ಭಂಡಾರಿಯವರ ಮುಂದಾಳತ್ವದ ಭಂಡಾರಿ ಹಾಸ್ಪಿಟಾಲಿಟಿಯ ಅಂಗ ಸಂಸ್ಥೆಯಾಗಿದೆ "ಪಂಜಾಬ್ ದಾ ಪಿಂಡ್ ರೆಸ್ಟೋರೆಂಟ್". ಭಂಡಾರಿ ಹಾಸ್ಪಿಟಾಲಿಟಿ ಸದ್ಯದಲ್ಲಿಯೇ ಹೊಸ ಆಹಾರ ಮಳಿಗೆಗಳಾದ ಮುಂಬೈ ಸ್ಟ್ರೀಟ್ (ವೆಜ್ ಕ್ಯಾಶುವಲ್ ಡೈನಿಂಗ್), ಬಾಂಬೆ ಬಾದ್‌ಶಾ (ಫಲೂಡ, ಲಸ್ಸಿ, ಫ್ರೆಶ್ ಕ್ರೀಮ್ ಜ್ಯೂಸ್, ಕ್ರೀಂ ಪಾರ್ಲರ್ ಇರುವ ಬೆವರೇಜ್ ಹಬ್) ಮತ್ತು ಪಂಜಾಬಿ ಘಸೀಟ್‌ರಾಂ ಬಾಂಬೈವಾಲ (ಸ್ವೀಟ್ ಸೆಂಟರ್) ತೆರೆಯಲಿದೆ.
ಹೆಚ್ಚಿನ ವಿವರಗಳಿಗೆ ಮೆ|ರೋಸ್ ಅಂಚನ್, ಎಚ್‌ಆರ್/ಅಡ್ಮಿನ್ ಮ್ಯಾನೇಜರ್, ಪಂಜಾಬ್ ದಾ ಪಿಂಡ್ ರೆಸ್ಟೋರೆಂಟ್, ಎಕ್ಸೆಲ್ ಮಿಸ್ಚೀಫ್ ಮಾಲ್, 3ನೇ ಮಹಡಿ, ಕೆಬಿಸಿ ಮತ್ತು ಹೋಟೆಲ್ ಲಕ್ಷ್ಮಿ ಮಹಲ್ ಎದುರು, ಕೆ ಎಸ್ ರಾವ್ ರಸ್ತೆ, ಮಂಗಳೂರು-575001 ಅಥವಾ ಮೊಬೈಲ್ ಸಂಖ್ಯೆ 8618467218, 8970991661 ಹಾಗೂ 8762110717ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.







