"ನಂಡೆ ಪೆಂಙಳ್" ಕೈಪಿಡಿ ಬಿಡುಗಡೆ ಕಾರ್ಯಕ್ರಮ

ಮಂಗಳೂರು, ಎ.17: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ಸಾರಥ್ಯದಲ್ಲಿ ನಡೆಯುತ್ತಿರುವ "ನಂಡೆ ಪೆಂಙಳ್" ಅಭಿಯಾನದ ಬ್ರೋಚರನ್ನು ಬೈಕಂಪಾಡಿ ಅಡ್ಕಾದ ನವೀಕೃತ ಜಾಮಿಯಾ ಮಸೀದಿಯ ಉದ್ಘಾಟನಾ ಸಮಾರಂಭದಲ್ಲಿ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಬಿಡುಗಡೆಗೊಳಿಸಿದರು.
ಯೆನೆಪೊಯ ವಿಶ್ವವಿದ್ಯಾನಿಲಯದ ಕುಲಪತಿ ಅಲ್ಹಾಜ್ ವೈ ಅಬ್ದುಲ್ಲಾ ಕುಂಞಿ ಮೊದಲ ಪ್ರತಿಯನ್ನು ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ಅಲ್ಹಾಜ್ ಇಬ್ರಾಹೀಂ ಮುಸ್ಲಿಯಾರ್ ಬೇಕಲ್, ಎಸ್.ವೈ.ಎಸ್. ರಾಜ್ಯ ಕಾರ್ಯದರ್ಶಿ ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ, ಮಾಣಿ ಅಬ್ದುಲ್ ಹಮೀದ್ ಮುಸ್ಲಿಯಾರ್, ಶಾಸಕ ಮೊಯ್ದಿನ್ ಬಾವ, ಬೈಕಂಪಾಡಿ ಮಸೀದಿಯ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿ ಸ್ಟಾರ್, "ನಂಡೆ ಪೆಂಙಳ್" ಅಭಿಯಾನದ ಮುಖ್ಯ ಸಲಹೆಗಾರ ಎಸ್.ಎಂ. ರಶೀದ್ ಹಾಜಿ, ಉಪಾಧ್ಯಕ್ಷರುಗಳಾದ ಬಿ.ಎಂ ಮುಮ್ತಾಝ್ ಅಲಿ, ಬಿ.ಎಚ್ ಅಸ್ಗರ್ ಹಾಜಿ, ಪ್ರಚಾರ ಮುಖ್ಯಸ್ಥ ರಫೀಕ್ ಮಾಸ್ಟರ್, ಟಿ.ಆರ್.ಎಫ್ ಉಪಾಧ್ಯಕ್ಷ ಸೈದುದ್ದೀನ್ ಬಜ್ಪೆ ಮತ್ತು ಅನೇಕ ಗಣ್ಯರು ಉಪಸ್ಥಿತರಿದ್ದರು.





