ಅಹ್ಮದ್ ಖುರೇಷಿ ಪ್ರಕರಣ: ಎ.28ಕ್ಕೆ "ಮಂಗಳೂರು ಚಲೋ"

ಮಂಗಳೂರು, ಎ.17: ಅಹ್ಮದ್ ಖುರೇಷಿ ಮೇಲಾದ ಪೊಲೀಸ್ ದೌರ್ಜನ್ಯವನ್ನು ಖಂಡಿಸಿ ನಗರದ ಜಮೀಯತುಲ್ ಫಲಾಹ್ ಕಚೇರಿಯಲ್ಲಿ ‘ಜಸ್ಟೀಸ್ ಫಾರ್ ಖುರೇಷಿ’ ವತಿಯಿಂದ ಸೋಮವಾರ ಜರಗಿದ ಸಭೆಯಲ್ಲಿ ಎ.28ರಂದು ‘ಮಂಗಳೂರು ಚಲೋ’ ನಡೆಸಲು ನಿರ್ಧರಿಸಲಾಗಿದೆ.
ಮಾಜಿ ಮೇಯರ್ ಕೆ.ಅಶ್ರಫ್, ಮುಸ್ತಫಾ ಕೆಂಪಿ, ನವಾಝ್ ಉಳ್ಳಾಲ್, ಸುಹೈಲ್ ಕಂದಕ್ ಮತ್ತಿತರ ಪ್ರಮುಖರು ಪಾಲ್ಗೊಂಡ ಈ ಸಭೆಯಲ್ಲಿ ಅಹ್ಮದ್ ಖುರೇಷಿ ಪ್ರಕರಣದಲ್ಲಿ ಪೊಲೀಸ್ ಇಲಾಖೆಯ ತಾರತಮ್ಯವನ್ನು ಖಂಡಿಸಲಾಯಿತಲ್ಲದೆ, ನ್ಯಾಯಕ್ಕಾಗಿ "ಮಂಗಳೂರು ಚಲೋ" ನಡೆಸಬೇಕು ಎಂಬ ಸಲಹೆ ಕೇಳಿ ಬಂತು. ಅದರಂತೆ ಎ.28ರಂದು ನಡೆಯುವ ‘ಮಂಗಳೂರು ಚಲೋ’ವನ್ನು ಯಶಸ್ಸಿಗೊಳಿಸಲು ‘ಜಸ್ಟೀಸ್ ಫಾರ್ ಖುರೇಷಿ’ ಕರೆ ನೀಡಿದೆ.
Next Story





