ಖರಗ್‌ಪುರ ಐಐಟಿಯಲ್ಲಿ ವಾಸ್ತುಶಾಸ್ತ್ರ ಪಠ್ಯ ಅಳವಡಿಕೆ
ಹೊಸದಿಲ್ಲಿ, ಎ.17: ದೇಶದ ಅತ್ಯಂತ ಹಳೆಯದಾದ ತಂತ್ರಶಾಸ್ತ್ರ ಸಂಸ್ಥೆ (ಐಐಟಿ) ಎಂಬ ಹೆಗ್ಗಳಿಕೆ ಹೊಂದಿರುವ ಖರಗ್‌ಪುರ ಐಐಟಿಯಲ್ಲಿ ಈ ಶೈಕ್ಷಣಿಕ ವರ್ಷದಿಂದ ವಾಸ್ತುಶಿಲ್ಪ ಶಾಸ್ತ್ರ ಕಲಿಯುವ ವಿದ್ಯಾರ್ಥಿಗಳಿಗೆ ವಾಸ್ತುಶಾಸ್ತ್ರವನ್ನು ಪಠ್ಯವಾಗಿ ಅಳವಡಿಸಲಾಗಿದೆ.
ಪದವಿಪೂರ್ವ ವಿದ್ಯಾರ್ಥಿಗಳಿಗೆ ವಾಸ್ತುಶಾಸ್ತ್ರದ ಮೂಲತತ್ವದ ಬಗ್ಗೆ, ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ವಿಸ್ತೃತ ಭಾಗವನ್ನು ಬೋಧಿಸಲಾಗುವುದು. ಈ ವರ್ಷದ ಆಗಸ್ಟ್‌ನಿಂದ ವಾಸ್ತುಶಾಸ್ತ್ರದ ತರಗತಿ ಆರಂಭವಾಗಲಿದೆ ಎಂದು ವರದಿಯಾಗಿದೆ. ಇದುವರೆಗೆ ಈ ಐಟಿಐಯಲ್ಲಿ ಪಾಶ್ಚಾತ್ಯ ವಾಸ್ತುಶಿಲ್ಪದ ವಿಷಯಗಳನ್ನು ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿಗಳು ಇನ್ನು ಮುಂದೆ ಪುರಾತನ ಭಾರತೀಯ ವಾಸ್ತುಶಾಸ್ತ್ರ ಪರಂಪರೆಯ ಬಗ್ಗೆ ಅಧ್ಯಯನ ನಡೆಸಲಿದ್ದಾರೆ ಎಂದು ಐಐಟಿಯ ಶಿಕ್ಷಕರು ತಿಳಿಸಿದ್ದಾರೆ.
Next Story