ಯುಎಇ 2ನೆ ಅತ್ಯಂತ ಸುರಕ್ಷಿತ ದೇಶ
ಶಾರ್ಜಾ (ಯುಎಇ), ಎ. 17: ಯುಎಇ ಜಗತ್ತಿನ ಎರಡನೆ ಅತ್ಯಂತ ಸುರಕ್ಷಿತ ದೇಶವಾಗಿದೆ ಎಂದು ವಿಶ್ವ ಆರ್ಥಿಕ ವೇದಿಕೆ (ಡಬ್ಲುಇಎಫ್)ಯ ವರದಿಯೊಂದು ತಿಳಿಸಿದೆ. ಮೊದಲ ಸ್ಥಾನದಲ್ಲಿ ಫಿನ್ಲ್ಯಾಂಡ್ ಇದೆ.
‘‘ಅದು ಅತ್ಯಂತ ಸುರಕ್ಷಿತ ಸ್ಥಳಗಳ ಪೈಕಿ ಒಂದು. ಇಲ್ಲಿ ವ್ಯವಸ್ಥಿತ ರೀತಿಯಲ್ಲಿ ಅಭಿವೃದ್ಧಿಗೊಂಡಿರುವ ಆತಿಥ್ಯ ಮತ್ತು ಮನರಂಜನಾ ಮೂಲಸೌಕರ್ಯಗಳಿವೆ’’ ಎಂದು ವರದಿ ಹೇಳಿದೆ.
ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕದ ಪ್ರಯಾಣ ಮತ್ತು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಯುಎಇ ಅತ್ಯಂತ ಸ್ಪರ್ಧಾತ್ಮಕ ಆರ್ಥಿಕತೆಯಾಗಿದೆ ಹಾಗೂ ಪ್ರವಾಸೋದ್ಯಮ ಸುರಕ್ಷತೆಯಲ್ಲಿ ಅದು ಜಾಗತಿಕವಾಗಿ ಎರಡನೆ ಸ್ಥಾನವನ್ನು ಹೊಂದಿದೆ ಎಂದು ವೇದಿಕೆಯ ಇತ್ತೀಚಿನ ಅಂಕಿಅಂಶಗಳು ಹೇಳುತ್ತವೆ.
Next Story