ಶಶಿಕಲಾಗೆ ಗೇಟ್ ಪಾಸ್ ?

ಚೆನ್ನೈ, ಎ.17: ತಮಿಳುನಾಡಿನಲ್ಲಿ ರಾಜಕೀಯ ಗರಿಗೆದರಿದ್ದು, ಎಐಎಡಿಎಂಕೆ ನಾಯಕಿ ಶಶಿಕಲಾ ನಟರಾಜನ್ ಸೇರಿದಂತೆ ಅವರ ಕುಟುಂಬವನ್ನು ಪಕ್ಷದಿಂದ ಹೊರ ಹಾಕುವ ಸಾಧ್ಯತೆ ಕಂಡು ಬಂದಿದೆ.
ಶಶಿಕಲಾ ವಿರುದ್ಧ ಮುಖ್ಯ ಮಂತ್ರಿ ಪಳನಿ ಸ್ವಾಮಿ ಅಸಮಾಧಾನಗೊಂಡಿದ್ದಾರೆಂದು ತಿಳಿದು ಬಂದಿದೆ. ಅವರ ಮನವೊಲಿಸಲು ಪಕ್ಷದ ಹಿರಿಯ ನಾಯಕ ತಂಬಿದೊರೈ ಪ್ರಯತ್ನ ಮುಂದುವರಿಸಿದ್ದಾರೆ ಎಂದು ತಿಳಿದು ಬಂದಿದೆ.
ಇಬ್ಬಾಗವಾಗಿರುವ ಎರಡೂ ಬಣವನ್ನು ಮತ್ತೆ ಒಂದಾಗಿಸುವ ನಿಟ್ಟಿನಲ್ಲಿ ಮುಖ್ಯ ಮಂತ್ರಿ ಪಳನಿ ಸ್ವಾಮಿ ಚಿಂತನೆ ನಡೆಸಿದ್ದಾರೆ. ಈ ಬಗ್ಗೆ ನಾಳೆ ಚೆನ್ನೈನಲ್ಲಿ ಪಕ್ಷದ ಮಹತ್ವದ ಸಭೆ ನಡೆಯಲಿದೆ ಎಂದು ತಿಳಿದು ಬಂದಿದೆ.,
Next Story





