ಎಸ್ಸೆಸ್ಸೆಫ್ ಮಂಗಳೂರು ಸೆಕ್ಟರ್ ವತಿಯಿಂದ ಪ್ರೊಲಾಝ್ ಕ್ಯಾಂಪ್

ಮಂಗಳೂರು,ಎ.16 : ಎಸ್ಸೆಸ್ಸೆಫ್ ಮಂಗಳೂರು ಸೆಕ್ಟರ್ ವತಿಯಿಂದ ಪ್ರೊಲಾಝ್ ಕ್ಯಾಂಪ್ ಅಡ್ಯಾರ್ ಕಣ್ಣೂರು ಸುನ್ನಿ ಸೆಂಟರ್‌ನಲ್ಲಿ ಹಸನ್ ಪಾಂಡೇಶ್ವರ್ ಅಧ್ಯಕ್ಷತೆಯಲ್ಲಿ ನಡೆಯಿತು.
ಡಿವಿಶನ್ ಅದ್ಯಕ್ಷ ಮನ್ಸೂರ್ ಮದನಿ ಕ್ಯಾಂಪ್ ಉದ್ಘಾಟಿಸಿ ಮಾತನಾಡಿದರು. ಮುಖ್ಯ ತರಬೇತಿಗಾರರಾಗಿ ಉಳ್ಳಾಲ ಡಿವಿಶನ್ ಅಧ್ಯಕ್ಷ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಹಾಗೂ ಜಿಲ್ಲಾ ನಾಯಕ ಸಿರಾಜುದ್ದೀನ್ ನಿಝಾಮಿ ಆಗಮಿಸಿದ್ದರು. ಕ್ಯಾಂಪ್ ನಲ್ಲಿ ಸೆಕ್ಟರ್ ಯುನಿಟ್ ಅವಾರ್ಡ್ ಅಡ್ಯಾರ್ ಕಣ್ಣೂರು ಯುನಿಟ್ ಗೆ ನೀಡಲಾಯಿತು.
ಮುಖ್ಯ ಅತಿಥಿಯಾಗಿ ಅಬ್ದುರ್ರಹ್ಮಾನ್ ಹಾಜಿ, ಕೆಸಿಎಫ್ ಕಾರ್ಯಕರ್ತ ರಶೀದ್, ಜಬ್ಬಾರ್ ಕಣ್ಣೂರು ಉಪಸ್ಥಿತರಿದ್ದರು. ನಿಝಾಮುದ್ದೀನ್ ಷಾ ಕಂದಕ್ ಸ್ವಾಗತಿಸಿದರು. ಅಬ್ದುಲ್ ಮಲಿಕ್ ವಂದಿಸಿದರು.
Next Story





