ಸೆ.16-ಅ.15 :ಕಾಂಗ್ರೆಸ್ ನ ಸಾಂಸ್ಥಿಕ ಚುನಾವಣೆ

ಹೊಸದಿಲ್ಲಿ, ಎ.18: ಕಾಂಗ್ರೆಸ್ ಪಕ್ಷದ ಬ್ಲಾಕ್. ಜಿಲ್ಲಾ ಮತ್ತು ರಾಜ್ಯ ಸಮಿತಿಯ ಅಧ್ಯಕ್ಷರ ಮತ್ತು ,ಎಎಐಸಿಸಿ ಸದಸ್ಯರುಗಳ ಆಯ್ಕೆಗೆ ಸಾಂಸ್ಥಿಕ ಚುನಾವಣೆ ಸೆಪ್ಟಂಬರ್15ರಿಂದ ಅಕ್ಟೋಬರ್ 15ರ ತನಕ ನಡೆಯಲಿದೆ.ಮುಲ್ಲಪಳ್ಳಿ ರಾಚಂದ್ರನ್ ನೇತೃತ್ವದ ಕಾಂಗ್ರೆಸ್ ನ ಕೇಂದ್ರ ಚುನಾವಣಾ ಸಮಿತಿಯು ಚುನಾವಣಾ ವೇಳಾಪಟ್ಟಿಯನ್ನು ತಯಾರಿಸಿ ರಾಜ್ಯ ಸಮಿತಿಗಳಿಗೆ ಕಳುಹಿಸಿಕೊಟ್ಟಿದೆ.
ಮೇ 15ರೊಳಗೆ ಸದಸ್ಯತ್ವ ಅಭಿಯಾನವನ್ನು ಪೂರ್ಣಗೊಳಿಸುವಂತೆ ಹೈಕಮಾಂಡ್ ರಾಜ್ಯ ಸಮಿತಿಗಳಿಗೆ ಆದೇಶ ನೀಡಿದೆ.
ಮೇ ಮೊದಲ ವಾರದಲ್ಲಿ ಕಾಂಗ್ರೆಸ್ ನ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ. ಈ ವರ್ಷದ ಡಿಸೆಂಬರ‍್ ಅಂತ್ಯದೊಳಗೆ ಸಾಂಸ್ಥಿಕ ಚುನಾವಣೆ ನಡೆಸುವಂತೆ ಕಾಂಗ್ರೆಸ್‌ಗೆ ಭಾರತದ ಚುನಾವಣಾ ಆಯೋಗವು ನಿದೇರ್ಶನ ನೀಡಿದ್ದು, ಆ ಹಿನ್ನೆಲೆಯಲ್ಲಿ ಕಾಂಗ್ರಸ್‌ನ ರಾಜಕೀಯ ಚಟುವಟಿಕೆ ಚುರುಕಾಗಿದೆ.
Next Story