ರಾಜಧಾನಿ,ಶತಾಬ್ದಿ ರೈಲುಗಳ ಕ್ರಿಯಾತ್ಮಕ ಪ್ರಯಾಣದರಗಳಿಗೆ ಎಲ್‌ಟಿಎ ಸೌಲಭ್ಯ

ಹೊಸದಿಲ್ಲಿ,ಎ.18: ರಾಜಧಾನಿ ಮತ್ತು ಶತಾಬ್ದಿ ಎಕ್ಸಪ್ರೆಸ್ ರೈಲುಗಳಲ್ಲಿ ಜಾರಿಯಲ್ಲಿರುವ ಕ್ರಿಯಾತ್ಮಕ ಅಥವಾ ಬದಲಾಗುವ ಪ್ರಯಾಣದರಗಳು ಸರಕಾರಿ ನೌಕರರು ಪಡೆಯತ್ತಿರುವ ಲೀವ್ ಟ್ರಾವಲ್ ಕನ್ಸೆಶನ್ (ಎಲ್‌ಟಿಸಿ) ಭತ್ಯೆಯ ವ್ಯಾಪ್ತಿಗೆ ಸೇರಲಿವೆ. ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಈ ಸಂಬಂಧ ಎಲ್ಲ ಕೇಂದ್ರ ಸಚಿವಾಲಯಗಳಿಗೆ ನಿರ್ದೇಶ ನೀಡಿದೆ.
ರೈಲ್ವೆ ಸಚಿವಾಲಯವು ರಾಜಧಾನಿ, ಶತಾಬ್ದಿ ಮತ್ತು ತುರಂತೊ ರೈಲುಗಳಲ್ಲಿ ಬದಲಾಗುವ ಪ್ರಯಾಣದರ ವ್ಯವಸ್ಥೆಯನ್ನು ಜಾರಿಗೊಳಿಸಿದ್ದು, ಪ್ರತಿ ಶೇ.10ರಷ್ಟು ಬರ್ತ್ ಟಿಕೆಟ್‌ಗಳ ಮಾರಾಟಕ್ಕೆ ಸೂಚಿತ ಮಿತಿಗೊಳಪಟ್ಟು ಮೂಲ ಪ್ರಯಾಣದರದಲ್ಲಿ ಶೇ.10ರಷ್ಟು ಏರಿಕೆಯಾಗುತ್ತದೆ.
ಎಲ್‌ಟಿಸಿಯ ಉದ್ದೇಶಕ್ಕಾಗಿ ಈ ರೈಲುಗಳಲ್ಲಿ ಸೀಟ್‌ಗಳನ್ನು ಕಾದಿರಿಸುವಾಗ ಬದಲಾಗುವ ಪ್ರಯಾಣದರಗಳು ಸೌಲಭ್ಯಕ್ಕೆ ಅರ್ಹವಾಗುತ್ತವಯೇ ಎಂಬ ಬಗ್ಗೆ ಸ್ಪಷ್ಟನೆಯನ್ನು ಕೋರಿ ವಿವಿಧ ವರ್ಗಗಳು ಇಲಾಖೆಗೆ ಪತ್ರಗಳನ್ನು ಬರೆದಿದ್ದವು.
Next Story





