ಉದ್ಯಾವರ: ಭಂಡಾರ ಮನೆ – ತೋಟ ಶಾಲೆ, ಪಡ್ಪರ ರಸ್ತೆ ಲೋಕಾರ್ಪಣೆ

ಕುಂಜತ್ತೂರು,ಎ.18: ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಮಂಜೇಶ್ವರ ಗ್ರಾಪಂ ವ್ಯಾಪ್ತಿಯ 6ನೆ ವಾರ್ಡಿನ ಭಂಡಾರ ಮನೆ – ತೋಟ ಶಾಲೆ ರಸ್ತೆ ಹಾಗೂ ಪಡ್ಪರ ರಸ್ತೆ ಮಂಗಳವಾರ ಲೋಕಾರ್ಪಣೆಗೊಂಡಿತು.
ಸುಮಾರು 7 ಲಕ್ಷ ರೂ. ನಪಂ ಅನುದಾನದಲ್ಲಿ ನಿರ್ಮಿಸಲಾಗಿದ್ದ ಕಾಂಕ್ರಿಟ್ ರಸ್ತೆಯನ್ನು ಗ್ರಾಪಂ ಅಧ್ಯಕ್ಷ ಅಬ್ದುಲ್ ಅಝೀಝ್ ಹಾಜಿ ಉದ್ಘಾಟಿಸಿದರು.
ಈ ಸಂದರ್ಭ ಗ್ರಾಪಂ ಅಭಿವೃದ್ದಿ ಸ್ಥಾಯಿ ಸಮಿತಿಯ ಅಧ್ಯಕ್ಷ ಎ ಮುಖ್ತಾರ್, ಗ್ರಾಪಂ ಸದಸ್ಯೆ ರಸೀನ ಖಾದರ್,ಹನೀಫ್ ಕಜೆ, ಗ್ರಾಪಂ ಕಾರ್ಯದರ್ಶಿ ಧನಂಜಯ್, ರಾಜ್ ಬೆಲ್ಚಾಡ ಮತ್ತಿತರರು ಉಪಸ್ಥಿತರಿದ್ದರು.
Next Story





