ಮ್ಯಾನ್ಮಾರ್ ಜಲ ಉತ್ಸವ : 285 ಸಾವು

ಯಾಂಗನ್ (ಮ್ಯಾನ್ಮಾರ್), ಎ. 18: ಮ್ಯಾನ್ಮಾರ್‌ನಲ್ಲಿ ನಡೆದ ನಾಲ್ಕು ದಿನಗಳ ವಾರ್ಷಿಕ ಜಲ ಉತ್ಸವ ‘ತಿಂಗ್ಯಾನ್’ನಲ್ಲಿ ಕನಿಷ್ಠ 285 ಮಂದಿ ಮೃತಪಟ್ಟಿದ್ದಾರೆ ಹಾಗೂ 1,073 ಮಂದಿ ಅಸ್ವಸ್ಥರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ಸಾವು ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ 13 ಹೆಚ್ಚಾಗಿದೆ.ಜಲ ಉತ್ಸವವು ಮ್ಯಾನ್ಮಾರ್‌ನಾದ್ಯಂತ ಗುರುವಾರದಿಂದ ರವಿವಾರದವರೆಗೆ ನಡೆದವು.
ಹೊಸ ವರ್ಷವನ್ನು ಸ್ವಾಗತಿಸುವ ಜಲ ಯುದ್ಧದ ಅವಧಿಯಲ್ಲಿ ನಡೆದ ಕೊಲೆ, ಕಳ್ಳತನ, ಮಾದಕದ್ರವ್ಯ ಬಳಕೆ ಮತ್ತು ಗುಂಪು ಹಿಂಸಾಚಾರಕ್ಕೆ ಸಂಬಂಧಿಸಿ 1,200 ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲಾಗಿದೆ.
ನೈ ಪಿ ತಾವ್‌ನಲ್ಲಿ 10, ಯಾಂಗನ್‌ನಲ್ಲಿ 44, ಮಾಂಡಲೇಯಲ್ಲಿ 36, ಸಗೈಂಗ್ ವಲಯದಲ್ಲಿ 26, ತನಿಂತರ್ಯಿ ವಲಯದಲ್ಲಿ 11, ಬಾಗೊ ವಲಯದಲ್ಲಿ 37, ಮಾಗ್ವೆ ವಲಯದಲ್ಲಿ 11, ಮಾನ್ ರಾಜ್ಯದಲ್ಲಿ 20, ರಾಖೈನ್ ರಾಜ್ಯದಲ್ಲಿ 17, ಶಾನ್ ರಾಜ್ಯದಲ್ಲಿ 29 ಮತ್ತು ಅಯೆಯವಡ್ಡಿ ವಲಯದಲ್ಲಿ 28 ಸಾವುಗಳು ಸಂಭವಿಸಿವೆ.
Next Story





