ಸಿರಿಯ ಮೇಲೆ ಅಮೆರಿಕ ದಾಳಿ : 10 ಸಾವು

ಬೆರೂತ್, ಎ. 18: ಸಿರಿಯದ ಪೂರ್ವದ ನಗರವೊಂದರ ಮೇಲೆ ಅಮೆರಿಕ ನೇತೃತ್ವದ ಮಿತ್ರ ಪಡೆ ನಡೆಸಿದ ವಾಯು ದಾಳಿಯಲ್ಲಿ ಕನಿಷ್ಠ 10 ಮಂದಿ ಮೃತಪಟ್ಟಿದ್ದಾರೆ ಹಾಗೂ ಡಝನ್‌ಗಟ್ಟಳೆ ಮಂದಿ ಗಾಯಗೊಂಡಿದ್ದಾರೆ ಎಂದು ಪ್ರತಿಪಕ್ಷ ಕಾರ್ಯಕರ್ತರು ಮಂಗಳವಾರ ಹೇಳಿದ್ದಾರೆ.
ಇರಾಕ್ ಗಡಿಯಲ್ಲಿರುವ ಐಸಿಸ್ ಭಯೋತ್ಪಾದಕರ ನಿಯಂತ್ರಣದಲ್ಲಿರುವ ಬೌಕಮಾಲ್ ನಗರದ ಮೇಲೆ ಸೋಮವಾರ ರಾತ್ರಿ ದಾಳಿ ನಡೆಯಿತು.
ಅಮೆರಿಕ ನೇತೃತ್ವದ ಮಿತ್ರಪಡೆಯು ತನ್ನ ದಾಳಿಗಳ ವೇಳೆ ನಾಗರಿಕರ ಸಾವು ನೋವುಗಳನ್ನು ನಿವಾರಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಮಾನವಹಕ್ಕುಗಳ ಸಂಘಟನೆ ‘ಹ್ಯೂಮನ್ಸ್ ರೈಟ್ಸ್ ವಾಚ್’ ಹೇಳಿದೆ.
Next Story





