ಬೋಸ್ಟನ್ ಮ್ಯಾರಥಾನ್‌ನಲ್ಲಿ ಭಾರತದ ಓಟಗಾರ ಸಾಗರ್

ಹೊಸದಿಲ್ಲಿ, ಎ.18: ಬೆಂಗಳೂರು ಮೂಲದ ದೃಷ್ಟಿಹೀನತೆ ಇರುವ ಭಾರತದ ಓಟಗಾರ ಸಾಗರ್ ಬಾಹೆಟಿ ಐತಿಹಾಸಿಕ ಬೋಸ್ಟನ್ ಮ್ಯಾರಥಾನ್‌ನಲ್ಲಿ ಭಾಗವಹಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ವಿಶ್ವದ ಹಳೆಯ, ಅತ್ಯಂತ ಸ್ಪರ್ಧಾತ್ಮಕ ಹಾಗೂ ಅರ್ಹತೆ ಪಡೆಯಲು ಅತ್ಯಂತ ಕಠಿಣವಾಗಿರುವ ಬೋಸ್ಟನ್ ಮ್ಯಾರಥಾನ್‌ನಲ್ಲಿ ಭಾಗವಹಿಸಿದ ಭಾರತದ ಮೊದಲ ದೃಷ್ಟಿಹೀನ ಓಟಗಾರ ಸಾಗರ್.
ಮೆಸಾಚ್ಯುಸೆಟ್ಸ್‌ನ ಅಂಧ ಹಾಗೂ ದೃಷ್ಟಿಹೀನರ ಸಂಸ್ಥೆ(ಎಂಎಬಿವಿಐ)ಯ ಬೆಂಬಲದಿಂದ 31ರ ಹರೆಯದ ಸಾಗರ್ ಅಮೆರಿಕಕ್ಕೆ ತೆರಳಿ, ಪ್ರಸಿದ್ಧ ಮ್ಯಾರಥಾನ್‌ನಲ್ಲಿ ಪಾಲ್ಗೊಂಡಿದ್ದಾರೆ. ಸೋಮವಾರ 30,000 ಓಟಗಾರರು ಭಾಗವಹಿಸಿದ್ದ ಮ್ಯಾರಥಾನ್‌ನಲ್ಲಿ 121ನೆ ಸ್ಥಾನ ಪಡೆದರು. ಕೇವಲ 4 ಗಂಟೆಯಲ್ಲಿ 42.16 ದೂರವನ್ನು ತಲುಪಿದರು.
ಸಾಗರ್ ಮ್ಯಾರಥಾನ್ ಓಟವನ್ನು ಅವರ ಹೆತ್ತವರಾದ ವಿಷ್ಣುಕಾಂತಾ ಹಾಗೂ ನರೇಶ್ ಬಾಹೆತಿ ಹತ್ತಿರದಿಂದ ವೀಕ್ಷಿಸಿದರು. ವಿಷ್ಣುಕಾಂತಾ-ನರೇಶ್ ದಂಪತಿ ತನ್ನ ಮಗನನ್ನು ಹುರಿದುಂಬಿಸಲು ಭಾರತದಿಂದ ಅಮೆರಿಕಕ್ಕೆ ತೆರಳಿದ್ದರು
Next Story





