Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ​ಎ.23: ಉಡುಪಿಯಲ್ಲಿ ಸಂವಿಧಾನ...

​ಎ.23: ಉಡುಪಿಯಲ್ಲಿ ಸಂವಿಧಾನ ರಕ್ಷಣೆಗಾಗಿ "ಜೈಭೀಮ್ ಜಾಥಾ"

ವಾರ್ತಾಭಾರತಿವಾರ್ತಾಭಾರತಿ18 April 2017 11:54 PM IST
share

ಉಡುಪಿ, ಎ.18: ಸಂವಿಧಾನ ಶಿಲ್ಪಿ, ಭಾರತರತ್ನ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ 126 ನೇ ಜನ್ಮದಿನದ ಪ್ರಯುಕ್ತ ಉಡುಪಿ ಜಿಲ್ಲೆಯಾದ್ಯಂತ ಸಂವಿಧಾನ ಮಹತ್ವ ಮತ್ತು ಅದಕ್ಕೆ ಬಂದೊದಗುತ್ತಿರುವ ಆತಂಕಗಳನ್ನು ಜನಮಾನಸಕ್ಕೆ ತಲುಪಿಸುವ ಉದ್ದೇಶದಿಂದ ಹಾಗೂ ಅಂಬೇಡ್ಕರ್ ಈ ದೇಶಕ್ಕೆ ನೀಡಿದ ಮಹತ್ವದ ಸಂವಿಧಾನವನ್ನು ರಕ್ಷಿಸುವ ಸಲುವಾಗಿ "ಸಂವಿಧಾನ ರಕ್ಷಣೆಗಾಗಿ - ಜೈಭೀಮ್ ರ್ಯಾಲಿ"ಯನ್ನು ಎ.23ರ ರವಿವಾರ ಹಮ್ಮಿಕೊಳ್ಳಲಾಗಿದೆ.

ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ ಮತ್ತು ದಲಿತ ಸಂಘಟನೆ ಗಳ ಒಕ್ಕೂಟ ಜಂಟಿಯಾಗಿ ಈ ರ್ಯಾಲಿಯನ್ನು ಹಮ್ಮಿಕೊಂಡಿದ್ದು, ದಲಿತ ದಮನಿತ ವರ್ಗದ ಪರವಾಗಿರುವ ಜಿಲ್ಲೆಯ ಅನೇಕ ಸಂಘಟನೆಗಳು ಈ ಜಾಥಾದೊಂದಿಗೆ ಕೈಜೋಡಿಸಲು ಮುಂದೆ ಬಂದಿದ್ದು ಯಶಸ್ಸಿಗೆ ಮತ್ತು ಸಂವಿಧಾನದ ರಕ್ಷಣೆಗೆ ಸಹಕರಿಸಲಿವೆ ಎಂದು ಸಂಘಟಕರ ಪ್ರಕಟನೆ ತಿಳಿಸಿದೆ.

"ಸಂವಿಧಾನ ಸಂರಕ್ಷಣೆಗಾಗಿ - ಜೈಭೀಮ್ ರ್ಯಾಲಿ" ಎ.23ರಂದು ಉಡುಪಿ ಜಿಲ್ಲೆಯ ಮೂರು ತಾಲೂಕುಗಳಿಂದ ಹೊರಡಲಿವೆ. ಅಂದು ಬೆಳಗ್ಗೆ 8:30ಕ್ಕೆ ಗಂಗೊಳ್ಳಿಯಿಂದ ಬೈಕ್ ರ್ಯಾಲಿ ಪ್ರಾರಂಭಗೊಳ್ಳಲಿದ್ದು, ಅಲ್ಲಿಂದ ಹೊರಡುವ ತಂಡವು ತಲ್ಲೂರು ಸರ್ಕಲ್‌ಗೆ ಬಂದು ಸರ್ಕಲ್‌ನಲ್ಲಿ ಜಾಥಾ ಉದ್ಘಾಟನೆ ಗೊಳ್ಳಲಿದೆ. ಅದೇ ರೀತಿ ಬೆಳಗ್ಗೆ 9 ಗಂಟೆಗೆ ಕಾರ್ಕಳ ಬಸ್ ನಿಲ್ದಾಣದ ಬಳಿ ಹಾಗೂ ಹೆಜಮಾಡಿಯಲ್ಲಿ ಬೈಕ್ ರ್ಯಾಲಿಗೆ ಚಾಲನೆ ನೀಡಲಾಗುವುದು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಸ್ಥಳಿಯ ತಾಲೂಕು ಹಾಗೂ ಗ್ರಾಮ ಶಾಖೆಗಳ ದಲಿತ ಸಂಘಟನೆಗಳ ನಾಯಕರು, ಆ ಪ್ರದೇಶದ ವಿವಿಧ ಧರ್ಮಗುರುಗಳು ಪಾಲ್ಗೊಳ್ಳಲಿದ್ದಾರೆ. ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿಯ ರಾಜ್ಯ ಮುಖಂಡರಾದ ಬಿ.ಆರ್.ಭಾಸ್ಕರ ಪ್ರಸಾದ್, ಹುಲಿಕುಂಟೆ ಮೂರ್ತಿ, ಹರ್ಷಕುಮಾರ್ ಕುಗ್ವೆ, ವಿಕಾಸ್ ಮೌರ್ಯ, ಎಸ್.ಸಿ.ದಿನೇಶ್ ಕುಮಾರ್, ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಲ್.ಅಶೋಕ್ ಮೊದಲಾದವರು ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.

ಕುಂದಾಪುರ ತಾಲೂಕಿನಿಂದ ಹೊರಡುವ ಜೈಭೀಮ್ ರ್ಯಾಲಿ ಗಂಗೊಳ್ಳಿ ಯಿಂದ ಹೆಮ್ಮಾಡಿ ತ್ರಾಸಿ ಮೂಲಕ ತಲ್ಲೂರು ಕ್ರಾಸ್‌ಗೆ ಬಂದು ಅಲ್ಲಿಂದ ಕುಂದಾಪುರ ನಗರ , ಶಾಸ್ತ್ರಿ ಸರ್ಕಲ್‌ನಲ್ಲಿ ಸಾರ್ವಜನಿಕ ಸಭೆ - ಕೋಟೇಶ್ವರ- ತೆಕ್ಕಟ್ಟೆ- ಕೋಟ-ಸಾಲಿಗ್ರಾಮ- ಸಾಸ್ತಾನ-ಮಾಬುಕಳ-ಬ್ರಹ್ಮಾವರ- ಸಂತೆಕಟ್ಟೆ ಯ ಮೂಲಕ ಉಡುಪಿ ತಲುಪಲಿದೆ.

 ಕಾರ್ಕಳ ತಾಲೂಕಿನ ರ್ಯಾಲಿಯು ಬೈಲೂರು- ಅಜೆಕಾರು- ಮುನಿಯಾಲು- ವರಂಗ- ಮುದ್ರಾಡಿ - ಹೆಬ್ರಿ- ಕರ್ಜೆ- ಪೆರ್ಡೂರು- ಹಿರಿಯಡ್ಕ- ಪರ್ಕಳ- ಮಣಿಪಾಲ-ಮಂಚಿಕೇರಿ-ಎಂಜಿಎಂ-ಕಲ್ಸಂಕ ಮೂಲಕ ಉಡುಪಿ ತಲುಪಲಿದೆ. ಹೆಜಮಾಡಿಯಿಂದ ಹೊರಡುವ ಉಡುಪಿ ತಾಲೂಕು ರ್ಯಾಲಿ ಪಡುಬಿದ್ರಿ- ಉಚ್ಚಿಲ- ಕಾಪು- ಇನ್ನಂಜೆ- ಶಿರ್ವ- ಮಂಚಕಲ್- ಬಂಟಕಲ್- ಬೆಳ್ಳೆ- ಮಣಿಪುರ- ಕಟಪಾಡಿ- ಕಪ್ಪೆಟ್ಟು- ಮಲ್ಪೆ- ತೊಟ್ಟಂ- ಗುಜ್ಜರಬೆಟ್ಟು- ಹೂಡೆ- ಕೆಮ್ಮಣ್ಣು- ನೇಜಾರು- ಸಂತೆಕಟ್ಟೆ- ಪುತ್ತೂರು-ನಿಟ್ಟೂರು- ಮೂಡುಬೆಟ್ಟು- ಆದಿ ಉಡುಪಿ- ಮೂಲಕ ಉಡುಪಿ ಪ್ರವೇಶಿಸಲಿದೆ. ಜಾಥಾ ತಲುಪುವ ಪ್ರದೇಶ ಗಳಲ್ಲಿ ಡಾ.ಅಂಬೇಡ್ಕರ್ ಚಿಂತನೆ ಮತ್ತು ಸಂವಿಧಾನದ ಮಹತ್ವಗಳ ಬಗ್ಗೆ ಜನ ಜಾಗೃತಿಯನ್ನು ಮೂಡಿಸಲಾಗುವುದು.
 
ಸಂಜೆ ಉಡುಪಿಯಲ್ಲಿ ಜಾಥಾಗಳು ಒಂದುಗೂಡಲಿದ್ದು, ನಗರದ ಹೃದಯಭಾಗದಲ್ಲಿರುವ ಜಟ್ಕಾ ಸ್ಟ್ಯಾಂಡ್‌ನಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಸಮಾರೋಪದ ಅಧ್ಯಕ್ಷತೆಯನ್ನು ಸಂವಿಧಾನ ಸಂರಕ್ಷಣಾ ಜೈಭೀಮ್ ಮಹಾರ್ಯಾಲಿಯ ಗೌರವಾದ್ಯಕ್ಷ ವಂ.ವಿಲಿಯಂ ಮಾರ್ಟೀಸ್ ವಹಿಸಲಿದ್ದು, ಮುಖ್ಯ ಭಾಷಣಕಾರರಾಗಿ ಚಿಂತಕ, ಅಂಕಣಕಾರ ಶಿವಸುಂದರ್, ಜನಪರ ಹೋರಾಟಗಾರ ನೂರ್ ಶ್ರೀಧರ್ ಮತ್ತು ಕರ್ನಾಟಕ ಜನಶಕ್ತಿ- ಮಹಿಳಾ ಮುನ್ನಡೆ ಸಂಘಟನೆ ಮುಖಂಡರಾದ ಮಲ್ಲಿಗೆ ಭಾಗವಹಿಸಲಿದ್ದಾರೆ. ಕಳೆದ ವರ್ಷ ಉಡುಪಿ ಚಲೋವನ್ನು ಯಶಸ್ವಿಯಾಗಿ ಸಂಘಟಿಸಿದ ರೀತಿಯಲ್ಲೇ ಈ ಸಂವಿಧಾನ ಸಂರಕ್ಷಣಾ - ಜೈಭೀಮ್ ಮಹಾ ರ್ಯಾಲಿಯನ್ನು ಸಂಘಟಿಸಲಾಗುತ್ತಿದೆ. ಇದಕ್ಕಾಗಿ ಎಲ್ಲಾ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳ ಲಾಗಿದೆ ಎಂದು ಸಂಘಟಕರ ಸಂಯುಕ್ತ ಹೇಳಿಕೆ ತಿಳಿಸಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X