ನಾಳೆ ಪಡುಮಲೆಯಲ್ಲಿ ನಾಗ-ಬ್ರಹ್ಮರ ಗುಡಿಗಳಿಗೆ ಶಿಲಾನ್ಯಾಸ
ಪುತ್ತೂರು, ಎ.18: ತುಳುನಾಡಿನ ವೀರ ಪುರುಷರಾದ ಕೋಟಿ ಚೆನ್ನಯರ ಜನ್ಮಸ್ಥಳ ಪಡುಮಲೆಯಲ್ಲಿ ಎ.20ರಂದು ನಾಗ-ಬ್ರಹ್ಮರ ಶಿಲಾಮಯ ಗುಡಿಗಳಿಗೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದು ಪಡುಮಲೆ ಕೋಟಿ ಚೆನ್ನಯ ಜನ್ಮಸ್ಥಳ ಸಂಚಲನಾ ಸಮಿತಿಯ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ತಿಳಿಸಿದ್ದಾರೆ.
ಪಡುಮಲೆಯಲ್ಲಿ ಕೋಟಿ ಚೆನ್ನಯರು ದಿನಂಪ್ರತಿ ಪೂಜೆ, ಆರಾಧನೆ ಮಾಡುತ್ತಿದ್ದ ಬ್ರಹ್ಮರ ಹಾಗೂ ನಾಗದೇವರ ಗುಡಿಗಳು ಸಂಪೂರ್ಣ ಅಜೀರ್ಣಾವಸ್ಥೆಯಲ್ಲಿದ್ದು, ಈ ಗುಡಿಗಳ ಜೀರ್ಣೋದ್ಧಾರ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಎ.20ರಂದು ಎಡನೀರು ಮಠದ ಕೇಶವಾನಂದ ಭಾರತೀ ಸ್ವಾಮೀಜಿ ಬ್ರಹ್ಮರ ಗುಡಿಗೆ ಶಿಲಾನ್ಯಾಸ ಮಾಡುವರು ಎಂದು ಅವರು ತಿಳಿಸಿದ್ದಾರೆ.
Next Story





