ಚಾಂಪಿಯನ್ಸ್ ಲೀಗ್: ರೊನಾಲ್ಡೊ ಹ್ಯಾಟ್ರಿಕ್ ಗೋಲು
ರಿಯಲ್ ಮ್ಯಾಡ್ರಿಡ್ ಸತತ 7ನೆ ಬಾರಿ ಸೆಮಫೈನಲ್‌ಗೆ

ಮ್ಯಾಡ್ರಿಡ್, ಎ.19: ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಬಾರಿಸಿದ ಹ್ಯಾಟ್ರಿಕ್ ಗೋಲು ನೆರವಿನಿಂದ ರಿಯಲ್ ಮ್ಯಾಡ್ರಿಡ್ ತಂಡ ಚಾಂಪಿಯನ್ಸ್ ಲೀಗ್‌ನಲ್ಲಿ ಸತತ 7ನೆ ಬಾರಿ ಸೆಮಿ ಫೈನಲ್‌ಗೆ ಲಗ್ಗೆ ಇಟ್ಟಿದೆ.
ಇಲ್ಲಿ ಮಂಗಳವಾರ ನಡೆದ ಚಾಂಪಿಯನ್ಸ್ ಲೀಗ್‌ನ ಎರಡನೆ ಹಂತದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮ್ಯಾಡ್ರಿಡ್ ತಂಡ ಬೆಯರ್ನ್ ಮ್ಯೂನಿಕ್ ತಂಡವನ್ನು 4-2 ಅಂತರದಿಂದ ಸೋಲಿಸಿತು. ಮೊದಲ ಹಂತದ ಕ್ವಾರ್ಟರ್ ಫೈನಲ್ ಪಂದ್ಯವನ್ನು 2-1 ಅಂತರದಿಂದ ಗೆದ್ದುಕೊಂಡಿದ್ದ ಮ್ಯಾಡ್ರಿಡ್ 6-3 ಗೋಲು ಸರಾಸರಿಯ ಆಧಾರದಲ್ಲಿ ಅಂತಿಮ 4ರ ಘಟ್ಟ ಪ್ರವೇಶಿಸಿದೆ.
ಮ್ಯಾಡ್ರಿಡ್‌ನ ಪರ ರೊನಾಲ್ಡೊ ಅವರು 76ನೆ, 105 ಹಾಗೂ 109ನೆ ನಿಮಿಷದಲ್ಲಿ ಹ್ಯಾಟ್ರಿಕ್ ಗೋಲು ಬಾರಿಸಿದರು, ಅಸೆನ್ಸಿಯೊ ಮಾರ್ಕೊ(112ನೆ ನಿ.) ಒಂದು ಗೋಲು ಬಾರಿಸಿದರು. ಮ್ಯೂನಿಕ್ ಪರವಾಗಿ ರಾಬರ್ಟ್ (53ನೆ ನಿಮಿಷ) ಹಾಗೂ ಸರ್ಜಿಯೊ ರಾಮೊಸ್(78ನೆ ನಿ.) ತಲಾ ಒಂದು ಗೋಲು ಬಾರಿಸಿದರು. ಹ್ಯಾಟ್ರಿಕ್ ಗೋಲು ಬಾರಿಸಿದ ರೊನಾಲ್ಡೊ ಚಾಂಪಿಯನ್ಸ್ ಲೀಗ್‌ನಲ್ಲಿ 100 ಗೋಲುಗಳನ್ನು ಬಾರಿಸಿದ ಮೊದಲ ಆಟಗಾರನೆಂಬ ಕೀರ್ತಿಗೆ ಭಾಜನರಾದರು.
ರೊನಾಲ್ಡೊ ಕಳೆದ ವಾರ ಯುರೋಪಿಯನ್ ಪಂದ್ಯಾವಳಿಗಳಲ್ಲಿ 100 ಗೋಲುಗಳನ್ನು ಬಾರಿಸಿದ ಸಾಧನೆ ಮಾಡಿದ್ದರು. ಇದೀಗ ಚಾಂಪಿಯನ್ಸ್ ಲೀಗ್‌ನಲ್ಲಿ ಶತಕದ ಗೋಲು ಬಾರಿಸಿದ ರೊನಾಲ್ಡೊ ಪ್ರತಿಸ್ಪರ್ಧಿ ಲಿಯೊನೆಲ್ ಮೆಸ್ಸಿ(94 ಗೋಲು)ಯವರನ್ನು ಹಿಂದಿಕ್ಕಿದ್ದಾರೆ.







