ಅನಾರೋಗ್ಯಪೀಡಿತ ದಲಿತ ಯುವಕನಿಗೆ ನೆರವಾದ ಎಸ್ ಡಿಪಿಐ ಕಾರ್ಯಕರ್ತರು

ಬಂಟ್ವಾಳ, ಎ.19: ಆರ್ಥಿಕ ಸಂಕಷ್ಟದ ಕಾರಣ ಅನಾರೋಗ್ಯ ಪೀಡಿತನಾಗಿದ್ದರೂ ಮನೆಯಲ್ಲೇ ಉಳಿದಿದ್ದ ದಲಿತ ಯುವಕನೋರ್ವನ ನೆರವಿಗೆ ಧಾವಿಸಿದ ಎಸ್ ಡಿಪಿಐ ಕಾರ್ಯಕರ್ತರು ಯುವಕನನ್ನು ಆಸ್ಪತ್ರೆಯ ಸೇರಿಸಿದ್ದಲ್ಲದೆ ಚಿಕಿತ್ಸಾ ಮೊತ್ತವನ್ನು ಭರಿಸಿ ಮಾನವೀಯತೆ ಮೆರೆದಿದ್ದಾರೆ.
ಇಲ್ಲಿನ ಕಾವಳಕಟ್ಟೆಯ ಕುದ್ರೊಟ್ಟಿ ಕಟ್ಟೆಯ ನಿವಾಸಿ ಯಾದವ ಎಂಬವರು ಅನರೋಗ್ಯ ಪೀಡಿತರಾಗಿದ್ದು, ಮನೆಯಲ್ಲೇ ಇದ್ದರು. ಅವರ ಕುಟುಂಬವು ಆರ್ಥಿಕ ಸಂಕಷ್ಟದಿಂದ ಕಂಗೆಟ್ಟಿದ್ದುದನ್ನು ಮನಗಂಡ ಸ್ಥಳೀಯ ಕಾವಳಕಟ್ಟೆ ಎಸ್ ಡಿಪಿಐ ಕಾರ್ಯಕರ್ತರು ಯಾದವರನ್ನುಆಸ್ಪತ್ರೆಗೆ ಸೇರಿಸಿ, ಎಲ್ಲಾ ವೆಚ್ಚವನ್ನು ಭರಿಸಿದ್ದಾರೆ. ಅಲ್ಲದೆ, ಮುಂದಿನ ದಿನಗಳಲ್ಲಿ ಯಾದವರ ಕುಟುಂಬಕ್ಕೆ ಪಡಿತರ ಹಾಗೂ ಇತರ ಸಹಾಯ ನೀಡುವ ಭರವಸೆಯನ್ನೂ ನೀಡಿದ್ದಾರೆ. ಮಾನವೀಯತೆಗೆ ಧರ್ಮದ ಹಂಗಿಲ್ಲ ಎನ್ನುವುದನ್ನು ತೋರಿಸಿಕೊಟ್ಟ ಎಸ್ ಡಿಪಿಐ ಕಾರ್ಯಕರ್ತರ ಸೇವೆಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.
Next Story





