ಯೋಧ ತೇಜ್ ಬಹದ್ದೂರ್ ರನ್ನು ಸೇವೆಯಿಂದ ವಜಾಗೊಳಿಸಿದ ಬಿಎಸ್ ಎಫ್
.jpg)
ಹೊಸದಿಲ್ಲಿ, ಎ.19: ಸೈನಿಕರಿಗೆ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಪೋಸ್ಟ್ ಮಾಡಿದ್ದ ಯೋಧ ತೇಜ್ ಬಹದ್ದೂರ್ ಯಾದವ್ ರನ್ನು ಬಿಎಸ್ ಎಫ್ ಸೇವೆಯಿಂದ ವಜಾಗೊಳಿಸಿದೆ.
ತೇಜ್ ಬಹದ್ದೂರ್ ಅವರ ಅಶಿಸ್ತಿನ ನಡವಳಿಕೆಗಾಗಿ ಬಿಎಸ್ ಎಫ್ ಕಾಯ್ದೆ ಹಾಗೂ ನಿಯಮಾನುಸಾರ ಅವರನ್ನು ವಜಾಗೊಳಿಸಲಾಗಿದೆ ಎಂದು ಬಿಎಸ್ ಎಫ್ ಹೇಳಿದೆ.
ಯೋಧರಿಗೆ ಕಳಪೆ ಗುಣಮಟ್ಟದ ಆಹಾರಗಳನ್ನು ನೀಡಲಾಗುತ್ತಿದೆ ಎಂದು ಆರೋಪಿಸಿ ತೇಜ್ ಬಹದ್ದೂರ್ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದ ವೀಡಿಯೋ ವೈರಲ್ ಆಗಿತ್ತು. ಬಹದ್ದೂರ್ ರ ಈ ಆರೋಪವನ್ನು ಬಿಎಸ್ ಎಫ್ ನಿರಾಕರಿಸಿತ್ತು.
Next Story