ಪುರುಷ ಸಹೋದ್ಯೋಗಿಯನ್ನು ಉಸಿರುಗಟ್ಟಿಸಿ ಕೊಂದ ಮಹಿಳಾ ಪೊಲೀಸ್
ಮುಝಫರ್ನಗರ,ಎ.19: ಸಹರಾನ್ಪುರದ ಪೊಲೀಸ್ ಕಾನ್ಸ್ಟೇಬಲ್ನೋರ್ವ ತನ್ನೊಂದಿಗೆ ಬಾಡಿಗೆ ಮನೆಯನ್ನು ಹಂಚಿಕೊಂಡಿದ್ದ ಮಹಿಳಾ ಸಹೋದ್ಯೋಗಿಯಿಂದ ಹತ್ಯೆಯಾಗಿದ್ದಾನೆ.
ಕೊಲೆಯಾಗಿರುವ ಕಾನ್ಸ್ಟೇಬಲ್ ಲಲಿತ್ ಕುಮಾರನ ಸೋದರನ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದು ಜಿಲ್ಲಾ ಎಸ್ಎಸ್ಪಿ ಲವಕುಮಾರ್ ತಿಳಿಸಿದರು.
ದಿಢೀರ್ ಅಸ್ವಸ್ಥಗೊಂಡಿದ್ದ ಲಲಿತ್ ಕುಮಾರನನ್ನು ಮಹಿಳಾ ಸಹೋದ್ಯೋಗಿಯೇ ಆಸ್ಪತ್ರೆಗೆ ಸಾಗಿಸಿದ್ದು, ಆ ವೇಳೆಗಾಗಲೇ ಆತ ಕೊನೆಯುಸಿರೆಳೆದಿದ್ದ. ಆತನನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವುದು ಮರಣೋತ್ತರ ಪರೀಕ್ಷೆಯಿಂದ ಬೆಳಕಿಗೆ ಬಂದಿದೆ ಎಂದರು.
ಲಲಿತ್ ಕುಮಾರ ಮತ್ತು ಆತನ ಮಹಿಳಾ ಸಹೋದ್ಯೋಗಿ ಸಹರಾನ್ಪುರದ ಚರ್ಚ್ ಕಂಪೌಂಡ್ ಪ್ರದೇಶದಲ್ಲಿಯ ಬಾಡಿಗೆ ಮನೆಯಲ್ಲಿ ಪ್ರತ್ಯೇಕ ಕೋಣೆಗಳಲ್ಲಿ ವಾಸವಾಗಿದ್ದರು ಎಂದು ಅವರು ತಿಳಿಸಿದರು.
Next Story