"ಉಯ್ಯಾಲೆ-ಕನಸುಗಳ ಕಾಮನಬಿಲ್ಲು": ಬೇಸಿಗೆ ಶಿಬಿರ

ಹೆಬ್ರಿ, ಎ.19: ಹೆಬ್ರಿ ಜೇಸಿಐ ವತಿಯಿಂದ ಜೇಸಿರೆಟ್ ಮತ್ತು ಯುವ ಜೇಸಿಐ ಸಹಕಾರದಲ್ಲಿ ಮೂರು ದಿನಗಳ ಕಾಲ "ಉಯ್ಯಾಲೆ-ಕನಸುಗಳ ಕಾಮನಬಿಲ್ಲು’ ಮಕ್ಕಳ ಬೇಸಿಗೆ ಶಿಬಿರ ನಡೆಯಿತು.
ನಿವೃತ್ತ ಉಪ ತಹಶೀಲ್ದಾರ್ ಎಸ್.ಟಿ. ಶೆಟ್ಟಿಗಾರ್ ಮುದ್ರಾಡಿ ಶಾಲೆಯಲ್ಲಿ ಶಿಬಿರ ಉದ್ಘಾಟಿಸಿದರು. ಹೆಬ್ರಿ ಜೇಸಿಐ ಅಧ್ಯಕ್ಷ ಪ್ರಶಾಂತ ಪೈ ಅಧ್ಯಕ್ಷತೆ ವಹಿಸಿದ್ದರು. ಜೇಸಿರೆಟ್ ಅಧ್ಯಕ್ಷೆ ರಂಜಿತಾ ಪ್ರಭು, ಮುದ್ರಾಡಿ ಶಾಲಾ ಮುಖ್ಯ ಶಿಕ್ಷಕ ಶ್ರೀನಿವಾಸ ಭಂಡಾರಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೃಷ್ಣ ಶೆಟ್ಟಿಗಾರ್, ಜೇಸಿಐನ ಉದಯ ಶೇರಿಗಾರ್, ಪ್ರಸಾದ ಶೆಟ್ಟಿ, ನಾಗೇಂದ್ರ ಉಪಸ್ಥಿತರಿದ್ದರು.
ಜೇಸಿಐ ವಲಯ ತರಬೇತುದಾರ ಅಕ್ಷತಾ ಗಿರೀಶ್ ಮೌಲ್ಯಯುತ ಶಿಕ್ಷಣ, ಜಾದೂಗಾರ ಸುಧನ್ವ ಮುದ್ರಾಡಿ ಅವರಿಂದ ಜಾದೂ ಮತ್ತು ಪವಾಡ ರಹಸ್ಯ ಬಯಲು ಕಾರ್ಯಕ್ರಮ, ಕಲಾ ಶಿಕ್ಷಕ ವೆಂಕಿ ಪಲಿಮಾರ್ ಕ್ಲೇ ಆರ್ಟ್, ಚಾಣಕ್ಯ ಟ್ಯುಟೋರಿಯಮಾರ ಶೆಟ್ಟಿ ತಂಡದಿಂದ ಸಾಮಾನ್ಯ ಜ್ಞಾನ ವಿಡಿಯೋ ಪ್ರಾತ್ಯಕ್ಷಿಕೆ ಮತ್ತು ಇಂಗ್ಲೀಷ್ ಕೋರ್ಸ್, ಜೇಸಿಐ ವಲಯ ತರಬೇತುದಾರ ಪ್ರಕಾಶ ಪೂಜಾರಿಯವರ ತರಬೇತಿ ಕಾರ್ಯಕ್ರಮ ಸಹಿತ ವಿವಿಧ ಕಾರ್ಯಕ್ರಮಗಳು ನಡೆಯಿತು.
ಸಮಾರೋಪ: ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಮಂಗಳವಾರ ನಡೆಯಿತು. ಜೇಸಿಐ ಅಧ್ಯಕ್ಷ ಪ್ರಶಾಂತ ಪೈ ಅಧ್ಯಕ್ಷತೆ ವಹಿಸಿ ಶಿಬಿರದ ಯಶಸ್ಸಿಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. ಮುದ್ರಾಡಿ ಗ್ರಾಪಂ ಅಧ್ಯಕ್ಷೆ ಶಶಿಕಲಾ ಪೂಜಾರಿ, ಹೆಬ್ರಿ ಚಾಣಕ್ಯ ಟ್ಯುಟೋರಿಯಲ್ ಕಾಲೇಜಿನ ಅಧ್ಯಕ್ಷ ಪತ್ರಕರ್ತ ಉದಯ ಕುಮಾರ ಶೆಟ್ಟಿ, ಜೇಸಿಐ ವಲಯ ಉಪಾಧ್ಯಕ್ಷ ಸರ್ವಜ್ಞ ತಂತ್ರಿ, ವಲಯ ಕ್ರೀಡಾ ವಿಬಾಗದ ಅಧಿಕಾರಿ ಪುಟ್ಟಣ್ಣ ಟ್, ಹರಿಪ್ರಸಾದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. 70 ಮಂದಿ ಪುಟಾಣಿಗಳು ಶಿಬಿರದಲ್ಲಿ ಭಾಗವಹಿಸಿದ್ದರು.







