ಮೇ 16ರಿಂದ ಪ್ರಥಮ ಪಿಯು ಪೂರಕ ಪರೀಕ್ಷೆ

ಬೆಂಗಳೂರು, ಎ.19: ಪದವಿ ಪೂರ್ವ ಶಿಕ್ಷಣ ಇಲಾಖೆಯ 2016-17ನೆ ಸಾಲಿನ ಪ್ರಥಮ ಪಿಯು ಪೂರಕ ಪರೀಕ್ಷೆಯು ಮೇ 16ರಿಂದ 27ರವರೆಗೆ ಪ್ರತಿದಿನ ಬೆಳಗ್ಗೆ 9ರಿಂದ ಮಧ್ಯಾಹ್ನ 12:15ರವರೆಗೆ ನಡೆಯಲಿದೆ ಎಂದು ಪರೀಕ್ಷಾ ಮಂಡಳಿ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.
ಆಯಾ ಜಿಲ್ಲಾ ಉಪನಿರ್ದೇಶಕರು ತಮ್ಮ ವ್ಯಾಪ್ತಿಯ ಕಾಲೇಜುಗಳಿಗೆ ವೇಳಾಪಟ್ಟಿ ಮಾಹಿತಿ ನೀಡಿ ವಿದ್ಯಾರ್ಥಿಗಳ ಗಮನಕ್ಕೆ ತರಲು ಕಾಲೇಜಿನ ಸೂಚನಾ ಫಲಕದಲ್ಲಿ ಪ್ರಕಟಿಸಲು ಕ್ರಮ ವಹಿಸುವಂತೆ ಸೂಚಿಸಿದೆ.
ವೇಳಾ ಪಟ್ಟಿ: ಮೇ 16-ಇಂಗ್ಲಿಷ್, ಮೇ 17-ಕನ್ನಡ, ತಮಿಳು, ತೆಲುಗು, ಮಳಿಯಾಳಂ, ಮರಾಠಿ, ಉರ್ದು, ಅರೇಬಿಕ್, ಫ್ರೆಂಚ್. ಮೇ 18-ಇತಿಹಾಸ, ಭೂಗರ್ಭಶಾಸ್ತ್ರ, ಎಲೆಕ್ಟ್ರಾನಿಕ್ಸ್, ಗಣಿತವಿಜ್ಞಾನ, ಮೇ 19-ತರ್ಕಶಸ್ತ್ರ, ಬಿಸಿನೆಸ್ ಸ್ಟಡೀಸ್, ಗಣಿತ, ಶಿಕ್ಷಣ, ಮೇ 20-ಅರ್ಥಶಾಸ್ತ್ರ, ಮೇ 22-ಐಚ್ಚಿಕ ಕನ್ನಡ, ಲೆಕ್ಕಶಾಸ್ತ್ರ, ಮನಃಶಾಸ್ತ್ರ, ಭೌತಶಾಸ್ತ್ರ, ಮೇ 23-ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ, ಗೃಹ ವಿಜ್ಞಾನ, ಮೇ 24-ಭೂಗೋಳಶಾಸ್ತ್ರ, ಜೀವಶಾಸ್ತ್ರ, ಬೇಸಿಕ್ ಬ್ಯಾಥ್ಸ್, ಮೇ 25-ಹಿಂದಿ, ಸಂಸ್ಕೃತ, ಮೇ 26-ಸಮಾಜಶಾಸ್ತ್ರ, ಮೇ 27-ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ರಾಜ್ಯಶಾಸ್ತ್ರ.





