ಅಜ್ಜನನ್ನು ಕೊಂದು ಫೇಸ್‌ಬುಕ್‌ನಲ್ಲಿ ಚಿತ್ರ ಹಾಕಿದ್ದಾತ ಆತ್ಮಹತ್ಯೆ

ನ್ಯೂಯಾರ್ಕ್, ಎ. 19: ಅಜ್ಜನನ್ನು ಕೊಂದು ಅದರ ಚಿತ್ರಗಳನ್ನು ಫೇಸ್‌ಬುಕ್‌ನಲ್ಲಿ ಹಾಕಿದ ಆರೋಪ ಎದುರಿಸುತ್ತಿರುವ ವ್ಯಕ್ತಿಯನ್ನು ಮಂಗಳವಾರ ಪೊಲೀಸರು ಬೆನ್ನತ್ತಿದ ಬಳಿಕ, ಆತ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮಾನಸಿಕ ಸ್ಥಿರತೆಯನ್ನು ಕಳೆದುಕೊಂಡಿದ್ದಾನೆ ಎಂದು ಹೇಳಲಾದ 37 ವರ್ಷದ ಸ್ಟೀವ್ ಸ್ಟೀಫನ್ಸ್ ಈಸ್ಟರ್ ಸಂಡೇಯಂದು 74 ವರ್ಷದ ರಾಬರ್ಟ್ ಗಾಡ್ವಿನ್ ಸೀನಿಯರ್ ಎಂಬವರನ್ನು ಓಹಿಯೊ ರಾಜ್ಯದ ಕ್ಲೀವ್‌ಲ್ಯಾಂಡ್‌ನಲ್ಲಿ ಗುಂಡು ಹಾರಿಸಿ ಕೊಂದಿದ್ದನು. ಬಳಿಕ ಅದರ ವೀಡಿಯೊಗಳನ್ನು ಫೇಸ್‌ಬುಕ್‌ಗೆ ಹಾಕಿದ್ದನು.
ಪೆನ್ಸಿಲ್ವೇನಿಯದ ಹೊಟೇಲ್ ನೌಕರನೊಬ್ಬ ಮಂಗಳವಾರ ಆತನನ್ನು ಗುರುತಿಸಿ ಪೊಲೀಸರಿಗೆ ಮಾಹಿತಿ ನೀಡಿದನು. ಪೊಲೀಸರನ್ನು ನೋಡಿ ಓಡಿ ಹೋದ ಆತ ಕೆಲವೇ ಕ್ಷಣಗಳಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡನು.
Next Story





