Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಸಮೀಪದ 6 ದೇವಸ್ಥಾನಗಳು, ಚರ್ಚ್ ,...

ಸಮೀಪದ 6 ದೇವಸ್ಥಾನಗಳು, ಚರ್ಚ್ , ಗುರುದ್ವಾರ ಬಿಟ್ಟು ದೂರದಲ್ಲಿರುವ ಒಂದು ಮಸೀದಿಯಿಂದ ತೊಂದರೆಯಾಯಿತೇ ಸೋನುಗೆ ?

ವಾರ್ತಾಭಾರತಿವಾರ್ತಾಭಾರತಿ19 April 2017 9:59 PM IST
share
ಸಮೀಪದ 6 ದೇವಸ್ಥಾನಗಳು, ಚರ್ಚ್ , ಗುರುದ್ವಾರ ಬಿಟ್ಟು ದೂರದಲ್ಲಿರುವ ಒಂದು ಮಸೀದಿಯಿಂದ ತೊಂದರೆಯಾಯಿತೇ ಸೋನುಗೆ ?

ಮುಂಬೈ, ಎ. 19 : ಗಾಯಕ ಸೋನು ನಿಗಮ್ ಅವರ ಅಝಾನ್ ಕುರಿತ ಹೇಳಿಕೆಯಿಂದ ಉಂಟಾಗಿರುವ ವಾದ ವಿವಾದ , ಚರ್ಚೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಸೋನು ಪರ , ವಿರೋಧ ಅಭಿಪ್ರಾಯ , ಟೀಕೆ ಟಿಪ್ಪಣಿಗಳು ಒಂದರ ಹಿಂದೊಂದರಂತೆ ಬರುತ್ತಲೇ ಇವೆ. ಈಗ ಸೋನು ನಿಗಮ್ ಕೂಡ ಈ ಚರ್ಚೆಯಲ್ಲಿ ಭಾಗವಹಿಸಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. 

ಮೌಲ್ವಿ ಒಬ್ಬರು ತಮ್ಮ ತಲೆ ಬೋಳಿಸಿದವರಿಗೆ ಹತ್ತು ಲಕ್ಷ ನೀಡುವುದಾಗಿ ಹೇಳಿದ್ದಕ್ಕೆ ಪ್ರತಿಯಾಗಿ ಸೋನು ತಮ್ಮ ತಲೆ ತಾವೇ ಬೋಳಿಸಿಕೊಂಡು ಹತ್ತು ಲಕ್ಷ ಕೊಡಿ ಎಂದು ಸವಾಲು ಹಾಕಿದ್ದಾರೆ. ಜೊತೆಗೆ ತಾನು ಮುಸ್ಲಿಂ, ಇಸ್ಲಾಂ ವಿರೋಧಿಯಲ್ಲ, ದೇವಸ್ಥಾನ, ಚರ್ಚ್ ಗಳ ಕುರಿತೂ ನಾನು ಇದೇ ಅಭಿಪ್ರಾಯ ಹೊಂದಿದ್ದೇನೆ ಎಂದು ಸ್ಪಷ್ಟೀಕರಣ ನೀಡಿದರು. 

ಈ ನಡುವೆ ವಿವಾದಕ್ಕೆ ಕಾರಣವಾದ ಸೋನು ಅವರ ಪ್ರಥಮ ಟ್ವೀಟ್ ನ ಸತ್ಯಸತ್ಯತೆ ತಿಳಿಯುವ ಪ್ರಯತ್ನವನ್ನು ironyofindia.com ವೆಬ್ ಸೈಟ್ ತಂಡ ಮಾಡಿದೆ. ಅದರಂತೆ ವೆಬ್ ಸೈಟ್ ಸೋನು ಅವರ ನಿವಾಸದ ಸುತ್ತಮುತ್ತ ಇರುವ ವಿವಿಧ ಪ್ರಾಥನಾಲಯಗಳು ಹಾಗು ಅವುಗಳಿಗೆ ಸೋನು ಮನೆಯಿಂದ ಇರುವ ದೂರವನ್ನು ಗೂಗಲ್ ಮ್ಯಾಪ್ ಬಳಸಿಕೊಂಡು ಲೆಕ್ಕ ಹಾಕಿದೆ. ಈ ಅಧ್ಯಯನದಲ್ಲಿ ಬಹಿರಂಗವಾಗಿರುವ ಮಾಹಿತಿ ಮಾತ್ರ ಸೋನು ಅವರ ಟ್ವೀಟ್ ನಲ್ಲಿರುವ ಹೇಳಿಕೆಗೆ ತಲೆಯಾಗುವುದಿಲ್ಲ. 

ಸೋನು ತಮ್ಮ ಮೊದಲ ಟ್ವೀಟ್ ನಲ್ಲಿ ಹೇಳಿದ್ದು God bless everyone. I'm not a Muslim and I have to be woken up by the Azaan in the morning. When will this forced religiousness end in India (5:25 AM - 17 Apr 2017). ಅಂದರೆ ಅಝಾನ್ ನಿಂದಾಗಿ ನಾನು ಬೆಳಗ್ಗೆ ನಿದ್ದೆ ಬಿಟ್ಟು ಏಳಬೇಕಾಗುತ್ತೆ ಎಂದು ಅವರು ಹೇಳಿದ್ದರು. ಆದರೆ ವಾಸ್ತವ ಬೇರೆಯೇ ಇದೆ. ಸೋನು ನಿಗಮ್ ಇರುವುದು ವರ್ಸೋವಾದ ವಿಲಾಸಿ ವಸತಿ ಸಮುಚ್ಚಯ ಅಮರನಾಥ್ ಟವರ್ಸ್ ನಲ್ಲಿ. ಇದು ಮುಂಬೈಯ ಅಂಧೇರಿ ಪಶ್ಚಿಮದಲ್ಲಿದೆ. ಇದರ ಸುತ್ತಮುತ್ತ ಹಲವು ಪ್ರಾರ್ಥನಾಲಯಗಳಿವೆ. 

ಸೋನು ಇರುವ ಅಮರನಾಥ್ ಟವರ್ಸ್ ನ ಒಂದು ಕಿಮೀ ವ್ಯಾಪ್ತಿಯಲ್ಲಿ  ಆರು ದೇವಸ್ಥಾನಗಳು , ಒಂದು ಆರ್ಯ ಸಮಾಜ ಮಂದಿರ, ಒಂದು ಚರ್ಚ್, ಒಂದು ಗುರುದ್ವಾರ ಹಾಗು ಒಂದು ಮಸೀದಿ ಇವೆ. ಕಟ್ಟಡದ ಅತ್ಯಂತ ಸಮೀಪ ಇರುವ ದೇವಸ್ಥಾನ  452 ಮೀ  ದೂರದಲ್ಲಿರುವ ಹನುಮಾನ್ ಮಂದಿರ್. ಅತ್ಯಂತ ದೂರ ಇರುವ ದೇವಸ್ಥಾನ 956 ಮೀ  ದೂರದಲ್ಲಿರುವ ರಾಮ್ ಮಂದಿರ. ಆದರೆ ಇರುವ ಒಂದೇ ಮಸೀದಿ ಸೋನು ಇರುವ ಕಟ್ಟಡಕ್ಕಿಂತ 912 ಮೀ ದೂರದಲ್ಲಿದೆ. ಈ 912 ಮೀ ( ಹೆಚ್ಚು ಕಡಿಮೆ ಒಂದು ಕಿಮೀ ) ದೂರದಲ್ಲಿರುವ ಮಸೀದಿಯಿಂದ ಬರುವ 50dB ಸಾಮರ್ಥ್ಯದ ಧ್ವನಿ ವರ್ಧಕದಿಂದ ಒಂದೆರಡು ನಿಮಿಷಗಳ ಅಝಾನ್ ನಿಂದ ಎತ್ತರದ ವಸತಿ ಸಮುಚ್ಚಯದಲ್ಲಿ ಹವಾ ನಿಯಂತ್ರಿತ ಕೊಠಡಿಯಲ್ಲಿ ಮಲಗುವ ಸೋನು ನಿಗಮ್ ಅವರ ನಿದ್ದೆ ಹಾಳಾಗುತ್ತದೆಯೇ ಎಂಬುದು ಈ ವೆಬ್ ಸೈಟ್ ನ ಪ್ರಶ್ನೆ !

ಸೋನು ಅವರ ವಸತಿ ಸಮುಚ್ಚಯದ ಸುತ್ತಮುತ್ತ ಇರುವ ಆರು ದೇವಸ್ಥಾನ ಹಾಗು ಮಸೀದಿ, ಗುರುದ್ವಾರ ಹಾಗು ಚರ್ಚ್ ಗಳ ಮ್ಯಾಪ್ ಇಲ್ಲಿದೆ : 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X