ನಾಗಪುರದಲ್ಲಿ ಪ್ರಾಂಶುಪಾಲರಿಗೆ ಹಲ್ಲೆ ಮಾಡಿ ಮಸಿ ಎರಚಿದ ಶಿವಸೇನೆ ಕಾರ್ಯಕರ್ತರು: ವೀಡಿಯೊ ಬಹಿರಂಗ !

ಹೊಸದಿಲ್ಲಿ,ಎ. 20: ನಾಗಪುರದಲ್ಲಿ ಶಿವಸೇನೆ ಕಾರ್ಯಕರ್ತರು ಇಲ್ಲಿನ ಕಾಲೇಜೊಂದರ ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ ಎನ್ನಲಾದ ಪ್ರಾಂಶುಪಾಲರಿಗೆ ಹಲ್ಲೆ ನಡೆಸಿ, ಮುಖಕ್ಕೆ ಕಪ್ಪು ಮಸಿ ಬಳಿದು ದಾಂಧಲೆ ಎಸಗಿದ ವೀಡಿಯೊ ಬಹಿರಂಗವಾಗಿದೆ. ತಮ್ಮ ಪರಾಕ್ರಮದ ನಂತರ ಶಿವಸೇನೆಕಾರ್ಯಕರ್ತರು ಪ್ರಾಂಶುಪಾಲನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ವಿದ್ಯಾರ್ಥಿನಿ ಪರೀಕ್ಷೆಯ ವೇಳೆ ನಕಲು ಹೊಡೆಯುವಾಗ ಸಿಕ್ಕಿಬಿದ್ದಿದ್ದಳು. ಅವಳ ಬಳಿಯಿದ್ದ ಐಕಾರ್ಡನ್ನು ವಶಪಡಿಸಿಕೊಳ್ಳಲಾಗಿತ್ತು. ಅದನ್ನು ವಿದ್ಯಾರ್ಥಿನಿಗೆ ನೀಡಬೇಕಾದರೆ ತನ್ನೊಂದಿಗೆ ದೈಹಿಕ ಸಂಬಂಧ ಬೆಳೆಸಬೇಕೆನ್ನು ವ ಪ್ರಾಂಶುಪಾಲ ಬೇಡಿಕೆ ಇಟ್ಟಿದ್ದನ್ನೆನ್ನಲಾಗಿದೆ. ಈ ವಿಷಯವನ್ನು ವಿದ್ಯಾರ್ಥಿನಿ ಶಿವಸೇನಾ ಕಾರ್ಯಕರ್ತರಿಗೆ ತಿಳಿಸಿದ್ದಳು. ಶಿವಸೈನಿಕರು ಪ್ರಾಂಶುಪಾಲರಿಗೆ ಧರ್ಮದೇಟು ಕೊಟ್ಟು ಚೆನ್ನಾಗಿ ವಿಚಾರಿಸಿಕೊಂಡಿದ್ದಾರೆ. ನಂತರ ಆತನನ್ನು ಪೊಲೀಸರಿಗೆ ಒಪ್ಪಿಸಿ ಕೇಸು ದಾಖಲಿಸಿಕೊಳ್ಳುವಂತೆ ಮಾಡಿದ್ದಾರೆ. ವಿದ್ಯಾರ್ಥಿನಿಗೆ ಪರೀಕ್ಷೆ ಹಾಜರಾಗಲು ಅನುಮತಿ ಕೊಡಬೇಕಿದ್ದರೆ ಮತ್ತು ಐಕಾರ್ಡನ್ನು ಕೊಡಬೇಕಿದ್ದರೆ ತನ್ನೊಂದಿಗೆ ದೈಹಿಕ ಸಂಬಂಧಕ್ಕೆ ಒಪ್ಪಬೇಕೆಂದು ಪ್ರಾಂಶುಪಾಲ ಬೇಡಿಕೆ ಇಟ್ಟಿದ್ದ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾಳೆ. ಈ ಘಟನೆ ನಾಗಪುರದ ಧರಮ್ ಪೇಟ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆದಿದೆ.





