‘ದಿವ್ಯಾಂಗ ’ಸಿಬ್ಬಂದಿಯನ್ನು ಅವಮಾನಿಸಿದ ಉ.ಪ್ರ.ಸಚಿವ
ವೈರಲ್ ಆದ ವೀಡಿಯೊ

ಲಕ್ನೋ,ಎ.20: ದಿವ್ಯಾಂಗರ ಸಬಲೀಕರಣ ಇಲಾಖೆಗೆ ದಿಢೀರ್ ಭೇಟಿ ನೀಡಿದ ಉತ್ತರ ಪ್ರದೇಶದ ಖಾದಿ ಮತ್ತು ಗ್ರಾಮೋದ್ಯೋಗ ಸಚಿವ ಸತ್ಯದೇವ ಪಚೌರಿ ಅವರು ಅಲ್ಲಿಯ ಅಂಗವಿಕಲ ಸಿಬ್ಬಂದಿಯನ್ನು ಅವಮಾನಿಸಿದ ಘಟನೆ ನಡೆದಿದ್ದು, ಇದರ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಇತ್ತೀಚಿಗಷ್ಟೇ ಮುಖ್ಯಮಂತ್ರಿ ಆದಿತ್ಯನಾಥ ಅವರು ‘ವಿಕಲಾಂಗ ಕಲ್ಯಾಣ ವಿಭಾಗ ’ವನ್ನು ‘ದಿವ್ಯಾಂಗ ಜನ ಸಶಕ್ತೀಕರಣ (ದಿವ್ಯಾಂಗರ ಸಬಲೀಕರಣ)ವಿಭಾಗ ’ವನ್ನಾಗಿ ಮರುನಾಮಕರಣಗೊಳಿಸಿದ್ದರು.
ಬುಧವಾರ ಇಲಾಖೆಗೆ ಹಠಾತ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದ ಸಚಿವರಿಗೆ ‘ದಿವ್ಯಾಂಗ ’ಗುತ್ತಿಗೆ ನೌಕರನೋರ್ವ ಎದುರಾಗಿದ್ದ. ಆತನನ್ನು ಕಂಡು ,ನೀವು ‘ಲೂಲಾ ಲಂಗ್ಡಾ ’ ವ್ಯಕ್ತಿಯನ್ನು ಕೆಲಸಕ್ಕಿಟ್ಟುಕೊಂಡಿದ್ದೀರಿ. ಆತ ಏನು ಕೆಲಸ ಮಾಡಬಲ್ಲ? ಇದು ಇಲ್ಲಿ ನೈರ್ಮಲ್ಯ ಕೊರತೆಗೆ ಕಾರಣವಾಗಿದೆ ಎಂದು ಅಧಿಕಾರಿಯನ್ನು ತರಾಟೆ ಗೆತ್ತಿಕೊಂಡಿದ್ದರು.
Uttar Pradesh Minister Satyadev Pachauri ill-treats differently-abled during inspection pic.twitter.com/utwgxdcVqi
— ET Politics (@ETPolitics) April 20, 2017