ಪರಿಸರ ಸ್ನೇಹಿ ವಿಧಾನ: ಮುಂಬೈ ಕಸಾಯಿಖಾನೆಗಳ ಪ್ರಾಣಿತ್ಯಾಜ್ಯದಿಂದ 160 ಬೀದಿದೀಪಗಳನ್ನು ಉರಿಸಬಹುದು

ಮುಂಬೈ,ಎ.20: ನಗರದ ದೇವನಾರ್‌ನಲ್ಲಿರುವ ಕಸಾಯಿಖಾನೆಯು ಪ್ರಾಣಿ ತ್ಯಾಜ್ಯಗಳನ್ನು ಬಳಸಿಕೊಂಡು ಪ್ರತಿ ತಿಂಗಳು 1,000 ಯೂನಿಟ್ ವಿದ್ಯುತ್‌ನ್ನು ಉತ್ಪಾದಿಸುತ್ತದೆ. ಇದರಿಂದ ವಿದ್ಯುತ್ ಬಲ್ಬ್‌ವೊಂದನ್ನು 10,000 ಗಂಟೆಗಳವರೆಗೆ ಉರಿಸಬಹುದಾಗಿದೆ.
ಈ ಕಸಾಯಿಖಾನೆಯಿಂದ ಪ್ರತಿ ದಿನ ಏಳೆಂಟು ಸಾವಿರ ಕೆ.ಜಿ.ಪ್ರಾಣಿತ್ಯಾಜ್ಯ ಹೊರಬೀಳುತ್ತದೆ ಮತ್ತು ಬಯೊಮಿಥೇನೈಸೇಷನ್ ವಿಧಾನದ ಮೂಲಕ ಪ್ರತಿ ದಿನ 40 ಕಿಲೋವ್ಯಾಟ್ ವಿದ್ಯುತ್ ಉತ್ಪಾದನೆಗೆ ಈ ತ್ಯಾಜ್ಯವನ್ನು ಬಳಸಲಾಗುತ್ತದೆ.
ಈ ವಿದ್ಯುತ್‌ನ್ನು 160 ಬೀದಿ ದೀಪಗಳನ್ನು ಬೆಳಗಿಸಲು ಮತ್ತು ಕಸಾಯಿಖಾನೆಯಲ್ಲಿನ ಇತರ ವಿದ್ಯುತ್ ಉಪಕರಣಗಳಿಗೆ ಬಳಸಲು ಬೃಹನ್ಮುಂಬೈ ಮಹಾನಗರ ಪಾಲಿಕೆಯು ಉದ್ದೇಶಿಸಿದೆ.
ಪ್ರಾಣಿತ್ಯಾಜ್ಯವನ್ನು ಪರಿಸರ ಸ್ನೇಹಿ ರೀತಿಯಲ್ಲಿ ಸಂಸ್ಕರಿಸಲು ಕಸಾಯಿಖಾನೆಯ ಅಧಿಕಾರಿಗಳು 2014ರಲ್ಲಿ ಭಾಭಾ ಅಣು ಸಂಶೋಧನಾ ಕೇಂದ್ರದ ನೆರವಿನೊಂದಿಗೆ 5 ಮತ್ತು 15 ಮೆ.ಟ.ಸಾಮರ್ಥ್ಯದ ಎರಡು ಬಯೊಮಿಥೇನೇಷನ್ ಸ್ಥಾವರಗಳನ್ನು ಐದು ಕೋ.ರೂ.ವೆಚ್ಚದಲ್ಲಿ ಸ್ಥಾಪಿಸಿದ್ದಾರೆ.
Next Story





