ಆದಾಯ ತೆರಿಗೆ ಪಾವತಿಸದ ಕೇರ್ನ್‌ಗೆ 30,000 ಕೋ.ರೂ.ದಂಡ ಹೇರಲು ಕ್ರಮ

ಹೊಸದಿಲ್ಲಿ,ಎ.20: 10,247 ಕೋ.ರೂ.ಬಂಡವಾಳ ಗಳಿಕೆ ತೆರಿಗೆಯನ್ನು ಸಕಾಲದಲ್ಲಿ ಪಾವತಿಸುವಲ್ಲಿ ವೈಫಲ್ಯಕ್ಕಾಗಿ 30,700 ಕೋ.ರೂ.ವರೆಗೆ ದಂಡ ವಿಧಿಸುವುದಾಗಿ ಸೂಚಿಸಿ ಆದಾಯ ತೆರಿಗೆ ಇಲಾಖೆಯು ಬ್ರಿಟಿಷ್ ಸಂಸ್ಥೆ ಕೇರ್ನ್ ಎನರ್ಜಿಗೆ ಹೊಸದಾಗಿ ನೋಟಿಸ್ ಹೊರಡಿಸಿದೆ.
ಪೂರ್ವಾನ್ವಯವಾಗಿ ತೆರಿಗೆ ಹೇರಿಕೆ ಕ್ರಮವನ್ನು ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣವು ಎತ್ತಿ ಹಿಡಿದ ಕೆಲವೇ ವಾರಗಳಲ್ಲಿ ಇಲಾಖೆಯು ಮೊದಲು 10,247 ಕೋ.ರೂ.ಗಳ ಪಾವತಿಗೆ ಸೂಚಿಸಿ ಹೊಸದಾಗಿ ನೋಟಿಸ್ ಹೊರಡಿಸಿತ್ತು. ಬಳಿಕ ತೆರಿಗೆಯನ್ನು ಮತ್ತು ರಿಟರ್ನ್‌ಗಳನ್ನು ಸಕಾಲದಲ್ಲಿ ಸಲ್ಲಿಸುವಲ್ಲಿ ವೈಫಲ್ಯಕ್ಕಾಗಿ ದಂಡವನ್ನೇಕೆ ವಿಧಿಸಬಾರದು ಎನ್ನುವುದಕ್ಕೆ ಕಾರಣ ಕೇಳಿ ಇನ್ನೊಂದು ನೋಟಿಸ್ ಜಾರಿಗೊಳಿಸಿದೆ.
ನೋಟಿಸಿಗೆ ಉತ್ತರಿಸಲು ಕೇರ್ನ್ 10 ದಿನಗಳ ಕಾಲಾವಕಾಶ ಕೋರಿದೆ ಎಂದು ಹಿರಿಯ ತೆರಿಗೆ ಅಧಿಕಾರಿಗಳು ತಿಳಿಸಿದರು.
Next Story