ಚೆಂಬರಿಕೆ ಖಾಝಿ ನಿಗೂಢ ಮೃತ್ಯು ಪ್ರಕರಣ: ಸಿಬಿಐ ಮರುತನಿಖೆಗೆ ಆಗ್ರಹಿಸಿ ಅಂಚೆ ಕಾರ್ಡ್ ಚಳವಳಿ

ಮಂಜೇಶ್ವರ, ಎ.20: ಚೆಂಬರಿಕೆ ಖಾಝಿ ಸಿ.ಎಂ. ಅಬ್ದುಲ್ಲಾ ಮೌಲವಿಯವರ ಮರಣದಲ್ಲಿನ ನಿಗೂಢತೆಯನ್ನು ಹೊರ ತರುವಲ್ಲಿ ಪ್ರಕರಣವನ್ನು ಸಿ.ಬಿ.ಐ. ಮರುತನಿಖೆ ನಡೆಸಬೇಕು ಎಂದು ಆಗ್ರಹಿಸಿ ಎಸ್ಕೆಎಸ್ಸೆಸ್ಸೆಫ್ ಮಚ್ಚಂಪಾಡಿ ಶಾಖೆ ವತಿಯಿಂದ ಅಂಚೆ ಕಾರ್ಡ್ ಚಳವಳಿ ನಡೆಯಿತು. ಪ್ರಧಾನಿಗೆ ಅಂಚೆ ಕಾರ್ಡ್ ಕಳುಹಿಸುವ ಮೂಲಕ ಮನವಿ ಮಾಡಲಾಯಿತು.
ಈ ಸಂದರ್ಭ ಎಸ್ಕೆಎಸ್ಸೆಸ್ಸೆಫ್ ಕಾರ್ಯಕರ್ತರಾದ ಹುಸೈನಾರ್ , ನೌಫಲ್ , ನೌಶಾದ್ , ಸಾಬಿತ್ ಅನ್ಸಾರ್ ಮತ್ತಿತರರು ಉಪಸ್ಥಿತರಿದ್ದರು.
Next Story





