ಅಕ್ರಮ ಮರಳು ಸಾಗಾಟ: ಜಿಲ್ಲಾ ಮರಳು ಸಮಿತಿ ಅಧಿಕಾರಿಗಳಿಂದ ಟಿಪ್ಪರ್ ವಶ

ಮೂಡಿಗೆರೆ, ಎ.20: ಅಕ್ರಮ ಮರಳು ಸಾಗಿಸುತ್ತಿದ್ದ ದ ಟಿಪ್ಪರ್ ಒಂದನ್ನು ಜಿಲ್ಲಾ ಮರಳು ಸಮಿತಿ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ಗುರುವಾರ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಗೋಣಿಬೀಡು ಹೋಬಳಿಯ ಜಿ.ಅಗ್ರಹಾರ ಗ್ರಾಮದ ಹೇಮಾವತಿ ನದಿಯ ಮರಳು ಗಣಿ ಪ್ರದೇಶದಿಂದ ಅಕ್ರಮವಾಗಿ ಮೂರು ಟಿಪ್ಪರ್‌ಗಳಿಗೆ ಮರಳನ್ನು ತುಂಬಿದ್ದನ್ನು ಗಮನಿಸಿದ ಸ್ಥಳೀಯರು ಚಿಕ್ಕಮಗಳೂರು ಉಪ ವಿಭಾಗಾಧಿಕಾರಿ ಸಂಗಪ್ಪ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ.
ಈ ಮಾಹಿತಿ ಹಿನ್ನೆಲೆಯಲ್ಲಿ ಜಿಲ್ಲಾ ಮರಳು ಸಂಹಿತಿಯ ಅಧಿಕಾರಿ ರಾಜಸ್ವ ನಿರೀಕ್ಷಕ ಲೋಲಾಕ್ಷೆಗೌಡ, ಗೋಣಿಬೀಡು ಹೋಬಳಿ ರಾಜಸ್ವ ನಿರೀಕ್ಷಕ ಅಜ್ಜೇಗೌಡ, ಗನ್ ಮ್ಯಾನ್ ಸಿ.ಆರ್.ಭೈರೇಶ್ ಬೈಕ್‌ಗಳ ಮೂಲಕ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ 3 ಮರಳು ಟಿಪ್ಪರನ್ನು ಸಕಲೇಶಪುರ ತಾಲೂಕಿನ ಹುರುಡಿ ಗ್ರಾಮದ ಅಚ್ಚರಡಿ ಎಂಬಲ್ಲಿ ತಡೆಯಲು ಪ್ರಯತ್ನಿಸಿದ್ದಾರೆ. ಈ ವೇಳೆ ಒಂದು ಟಿಪ್ಪರನ್ನು ನಿಲ್ಲಿಸಲು ಯಶಸ್ವಿಯಾಗಿದ್ದು, ಇನ್ನೆರಡು ಟಿಪ್ಪರ್ ಪರಾರಿಯಾಗಿವೆ.
Next Story





