ಸೋನುಗೆ ಬೆಂಬಲ: ವ್ಯಕ್ತಿಗೆ ಚೂರಿ ಇರಿತ
.jpg)
ಉಜ್ಜಯಿನಿ, ಎ. 20 : ಸೋನು ನಿಗಮ್ ಅವರ ಅಝನ್ ಕುರಿತ ಹೇಳಿಕೆಯ ವಾದ ವಿವಾದ ಇದೀಗ ಹಿಂಸಾತ್ಮಕ ರೂಪ ತಾಳಿದೆ. ಸೋನು ಹೇಳಿಕೆ ಕುರಿತ ಚರ್ಚೆ ಮಧ್ಯಪ್ರದೇಶದಲ್ಲಿ ವ್ಯಕ್ತಿಯೊಬ್ಬನ ಇರಿತಕ್ಕೆ ಕಾರಣವಾಗಿದೆ.
ಇಲ್ಲಿನ ಗೋಪಾಲಪುರ ನಿವಾಸಿ ಶಿವಂ ರಾಯ್ ಸೋನು ಪರ ಅಭಿಪ್ರಾಯ ವ್ಯಕ್ತ ಪಡಿಸಿ ಫೇಸ್ ಬುಕ್ ಪೋಸ್ಟ್ ಹಾಕಿದ್ದರು. ಇದರಿಂದ ಕೆರಳಿದ ಮೊಹಮ್ಮದ್ ನಾಗೋರಿ ಹಾಗು ಫೈಝನ್ ಖಾನ್ ಅವರು ಶಿವಂ ಗೆ ಬೆದರಿಕೆ ಕರೆ ಮಾಡಿದ್ದರು ಎಂದು ಹೇಳಲಾಗಿದೆ.
" ಬಳಿಕ ಫ್ರೀ ಗಂಜ್ ಎಂಬಲ್ಲಿ ನನ್ನನ್ನು ಅವರು ಕರೆದರು. ನಾನು ಅಲ್ಲಿಗೆ ನನ್ನ ಮಿತ್ರ ಆಯುಷ್ ಶ್ರಿವಾಸ್ ಜೊತೆ ಹೋದಾಗ ಅವರು ನಮ್ಮ ಮೇಲೆ ಚೂರಿಯಿಂದ ಹಲ್ಲೆ ಮಾಡಿದರು " ಎಂದು ರಾಯ್ ದೂರಿದ್ದಾರೆ. ಆಯುಷ್ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹೇಳಲಾಗಿದೆ.
ಆರೋಪಿಗಳ ವಿರುದ್ಧ ಕೊಲೆ ಯತ್ನ ಆರೋಪದಲ್ಲಿ ಪ್ರಕರಣ ದಾಖಲಾಗಿದೆ. ಇನ್ನಷ್ಟೇ ಅವರನ್ನು ಬಂಧಿಸಬೇಕಾಗಿದೆ.
Next Story