ಟಿ-20 ಕ್ರಿಕೆಟ್ ಬೆಟ್ಟಿಂಗ್: ಆರು ಜನ ಬಂಧನ
ಬೆಂಗಳೂರು, ಎ.20: ಟಿ-20 ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಆರೋಪದ ಮೇಲೆ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ಜಾಲ ಹೋಬಳಿ ಮೈಲನಹಳ್ಳಿಯ ಪುನೀತ್(33), ನಾಗೇಶ್(35), ನಾಗರಾಜ(33), ಮಂಜುನಾಥ್ (33), ಬೊಮ್ಮನಹಳ್ಳಿಯ ರಾಟ್ ನಗರದ ನರಸಿಂಹರೆಡ್ಡಿ (30), ಬಾಲಾಜಿ ಲೇಔಟ್‌ನ ಸುರೇಶ್ (27) ಬಂಧಿತ ಆರೋಪಿಗಳಾಗಿದ್ದಾರೆ.
ಬಾಗಲೂರು ಮತ್ತು ಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಗಳಲ್ಲಿ ಟಿ-20 ಕ್ರಿಕೆಟ್ ಪಂದ್ಯ ನಡೆಯುತ್ತಿದ್ದ ವೇಳೆ ಹಣ ಕಟ್ಟಿಕೊಂಡು ಜೂಜಾಟ ನಡೆಸುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಬಂಧಿತರಿಂದ 37 ಸಾವಿರ ರೂ. ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡು ಇಲ್ಲಿನ ಬಾಗಲೂರು ಮತ್ತು ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.
Next Story