"ಆಧುನಿಕತೆಯ ವೇಗದಲ್ಲಿ ಹಿಂದಿನ ಪರಂಪರೆಗಳನ್ನು ಮರೆಯುವುದು ಸರಿಯಲ್ಲ"

ಪುತ್ತೂರು, ಎ.20: ಆಧುನಿಕತೆಯ ವೇಗದಲ್ಲಿ ನಾವು ಹಿಂದಿನ ಪರಂಪರೆಗಳನ್ನು ಮರೆಯುವುದು ಸರಿಯಲ್ಲ. ಕೋಟಿ ಚೆನ್ನಯರು ಹುಟ್ಟಿದ ಪಡುಮಲೆಯಲ್ಲಿ ಅವರ ಸ್ಮರಣೆಯನ್ನು ಉಳಿಸುವ ಕೆಲಸ ನಡೆಯುತ್ತಿರುವುದು ಉತ್ತಮ ಕೆಲಸ ಎಂದು ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಮಹಾಸ್ವಾಮೀಜಿ ಹೇಳಿದರು.
ಪುತ್ತೂರು ತಾಲೂಕಿನ ಪಡುಮಲೆಯಲ್ಲಿ ಗುರುವಾರ ನಡೆದ ಶ್ರೀ ನಾಗ -ಬ್ರಹ್ಮ ಮತ್ತು ಪರಿವಾರ ಶಕ್ತಿಗಳ ಶಿಲಾಮಯ ಗುಡಿ ನಿರ್ಮಾಣ ಮತ್ತು ಎರುಕೊಟ್ಯ ನಾಗ ಸನ್ನಿಧಿಯಲ್ಲಿ ಶಿಲಾನ್ಯಾಸ ನಡೆಸಿ ಬಳಿಕ ಪಕ್ಕದ ಬಳ್ಳಾಲರ ಕಾಲದ ಚಾವಡಿಯ ಅಂಗಳದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಾರತ ಬ್ಯಾಂಕ್‌ನ ಅಧ್ಯಕ್ಷ ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಜಯ ಸಿ. ಸುವರ್ಣ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕಿ ಶಕುಂತಳಾ ಟಿ. ಶೆಟ್ಟಿ, ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಮಾತನಾಡಿದರು. ಕ್ಷೇತ್ರ ನಿರ್ಮಾಣದ ವಾಸ್ತುಶಿಲ್ಪಿ ಪ್ರಸನ್ನ ಮುನಿಯಾಲ್, ಶಿಲ್ಪಿ ಶ್ರೀನಿವಾಸ್ ಅವರನ್ನು ಈ ಸಂದರ್ಭ ಎಡನೀರು ಸ್ವಾಮೀಜಿ ಸನ್ಮಾನಿಸಿದರು.
ಉದ್ಯಮಿ ಜೆ.ಸೀತಾರಾವ್, ರಂಜನ್ ಮಿಜಾರ್, ಬಿಜೆಪಿ ಜಿಲ್ಲಾ ಅಧ್ಯಕ್ಷ ಸಂಜೀವ ಮಠಂದೂರು, ಜಗನಿ ಕೃಷ್ಣಪ್ಪ, ಜಿಪ ಸದಸ್ಯೆ ಶಯನಾ ಜಯಾನಂದ್, ಜಮೀನು ದಾನಿ ಮೇಘನಾಥ ರೈ, ಬೆಳ್ತಂಗಡಿ ಬಿಲ್ಲವ ಸಂಘದ ಅಧ್ಯಕ್ಷ ಭಗೀರಥ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೋಟ್ಯಾನ್, ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ, ಪ್ರಮುಖರಾದ ಸೇಸಪ್ಪ ಕೋಟ್ಯಾನ್ ಬಂಟ್ವಾಳ, ಸಂಜೀವ ಪೂಜಾರಿ ಕುಚ್ಚಿಗುಡ್ಡೆ, ಉಮೇಶ್ ನಾಡಾಜೆ, ಕೋಟಿ ಚೆನ್ನಯ ಜನ್ಮಸ್ಥಳ ಸಂಚಲನ ಸಮಿತಿಯ ಕಾರ್ಯಾಧ್ಯಕ್ಷ ರುಕ್ಮಯ ಪೂಜಾರಿ, ಉಪಾಧ್ಯಕ್ಷರಾದ ವಿಜಯ ಕುಮಾರ್ ಸೊರಕೆ, ವೇದನಾಥ ಸುವರ್ಣ ಉಪಸ್ಥಿತರಿದ್ದರು.
ಕೋಟಿ ಚೆನ್ನಯ ಜನ್ಮಸ್ಥಳ ಸಂಚಲನ ಸಮಿತಿಯ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಶೇಖರ ನಾರಾವಿ ಕಾರ್ಯಕ್ರಮ ನಿರ್ವಹಿಸಿದರು. ಗೌರವಾಧ್ಯಕ್ಷ ವಿನೋದ್ ಆಳ್ವ ವಂದಿಸಿದರು







