ಸಾಲಭಾದೆ : ನೇಣು ಬಿಗಿದು ರೈತ ಆತ್ಮಹತ್ಯೆಗೆ ಶರಣು

ಶಿವಮೊಗ್ಗ, ಏ. 21: ಸಾಲಬಾಧೆಯಿಂದ ಬೇಸತ್ತು ರೈತರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಮಲವಗೊಪ್ಪ ಬಡಾವಣೆಯಲ್ಲಿ ನಡೆದಿದೆ.
ರಾಮಾನಾಯ್ಕ (53) ಆತ್ಮಹತ್ಯೆಗೆ ಶರಣಾದ ರೈತ ಎಂದು ಗುರುತಿಸಲಾಗಿದೆ. ಇವರು ತಮ್ಮ ಮನೆಯ ಸಮೀಪವೇ ನೇಣು ಹಾಕಿಕೊಂಡಿದ್ದು, ಕೂಡಲೇ ಇವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಆದರೆ ತಪಾಸಣೆ ನಡೆಸಿದ ವೈದ್ಯರು ರಾಮಾನಾಯ್ಕ ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ.
ರಾಮಾನಾಯ್ಕರಿಗೆ 4 ಎಕರೆ ಜಮೀನಿದ್ದು ರಾಗಿ, ಮೆಕ್ಕೆಜೋಳ, ತರಕಾರಿ ಬೆಳೆ ಬೆಳೆದಿದ್ದರು. ಆದರೆ ನೀರಿನ ಅಭಾವದಿಂದಾಗಿ ಬೆಳೆ ನಾಶವಾಗಿತ್ತು. ಬೆಳೆ ಬೆಳೆಯಲು ಹಾಗೂ ಮಗನ ವಿದ್ಯಾಭ್ಯಾಸ ಹಾಗೂ ಮಗಳ ಮದುವೆಗೆಂದು ಬ್ಯಾಂಕ್ ಹಾಗೂ ಕೈ ಸಾಲವಾಗಿ 4 ಲಕ್ಷ ರೂ. ಸಾಲ ಮಾಡಿದ್ದರು ಎನ್ನಲಾಗಿದೆ.
ನಿರೀಕ್ಷಿತ ಮಳೆಯಾಗದೇ ಇತ್ತ ಬೆಳೆಯೂ ಬಾರದೇ ಇರುವುದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ಧಾರೆ ಎಂದು ಹೇಳಲಾಗಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





