ಮನೆಗೆ ನುಗ್ಗಿ 4ಲಕ್ಷ ಮೌಲ್ಯದ ನಗನಗದು ಕಳವು
ಕಾರ್ಕಳ, ಎ.21: ಮುಲ್ಲಡ್ಕ ಗ್ರಾಮದಲ್ಲಿ ಎ.19ರಂದು ರಾತ್ರಿ ಮನೆಗೆ ನುಗ್ಗಿದ ಕಳ್ಳರು ಅಪಾರ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಸುಂದರ ಪೂಜಾರಿ ಎಂಬವರ ಮನೆಯ ಬೆಡ್ರೂಮ್ನ ಕಿಟಕಿಯ ಮರದ ಗ್ರಿಲ್ಳು ಮುರಿದು ಒಳನುಗ್ಗಿದ ಕಳ್ಳರು, ಗೋದ್ರೆಜ್ ಕಪಾಟಿನೊಳಗೆ ಬ್ಯಾಗ್ ನಲ್ಲಿರಿಸಿದ್ದ ಚಿನ್ನದ ಚೈನ್, ಹವಳದ ಚಿನ್ನದ ಸರ, ಎರಡು ಚಿನ್ನದ ಬಳೆಗಳು, ಎರಡು ಬಳೆಗಳು, 2 ಜೊತೆ ಚಿನ್ನದ ಬೆಂಡೋಲೆ, ಚಿನ್ನದ ಕರಿಮಣಿ ಸರವನ್ನು ಕಳವು ಮಾಡಿದ್ದಾರೆ.
ಕಳವಾದ ಒಟ್ಟು 176 ಗ್ರಾಂ ತೂಕದ ಚಿನ್ನಾಭರಣದ ಮೌಲ್ಯ 4 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಅಲ್ಲದೆ 15,000ರೂ. ನಗದು ಕಳವು ಮಾಡಲಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
Next Story





