ಜಿಲ್ಲಾ ಯೋಜನಾ ಸಮಿತಿಗೆ ಗೀತಾ ಚಂದ್ರಶೇಖರ ಆಯ್ಕೆ

ವಿಟ್ಲ,ಎ.21 : ದಕ್ಷಿಣ ಕನ್ನಡ ಜಿಲ್ಲಾ ಯೋಜನಾ ಸಮಿತಿಗೆ ಪಂಚಾಯತ್ ಮತ ಕ್ಷೇತ್ರದಿಂದ ಅನಂತಾಡಿ ಗ್ರಾಮದ ಗೋಳಿಕಟ್ಟೆ ನಿವಾಸಿ, ಬಂಟ್ವಾಳ ತಾ.ಪಂ. ಸದಸ್ಯೆ ಗೀತಾ ಚಂದ್ರಶೇಖರ ಆಯ್ಕೆಯಾಗಿದ್ದಾರೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ಅಧಿನಿಯಮ 1993 ಪ್ರಕರಣ 310(2) ರಲ್ಲಿ ಓದಿ ಕೊಂಡಂತೆ ಸರಕಾರವು ದ.ಕ. ಜಿಲ್ಲೆಗೆ ಯೋಜನಾ ಸಮಿತಿಯ ಸದಸ್ಯರಾಗಿ ಪಂಚಾಯತ್ ಮತ ಕ್ಷೇತ್ರದಿಂದ ಆಯ್ಕೆಯಾಗಿರುವುದಾಗಿ ದ.ಕ. ಜಿಲ್ಲಾ ಪಂಚಾಯತ್ ಕಾರ್ಯಾಲಯ ಅಧಿಸೂಚನೆ ಹೊರಡಿಸಿದೆ.
Next Story





