ಮುಡಿಪು: ನೇಣು ಬಿಗಿದು ವಿವಾಹಿತ ಆತ್ಮಹತ್ಯೆ

ಕೊಣಾಜೆ, ಎ.22: ವಿವಾಹಿತರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಮುಡಿಪುವಿನಲ್ಲಿ ಇಂದು ಬೆಳಗ್ಗೆ ನಡೆದಿದೆ.
ಮೃತರನ್ನು ಮುಡಿಪು ನವಗ್ರಾಮ ಸೈಟ್ ನಿವಾಸಿ ರವಿ(35) ಎಂದು ಗುರುತಿಸಲಾಗಿದೆ. ಚಾಲಕನಾಗಿ ದುಡಿಯುತ್ತಿದ್ದ ತಮಿಳುನಾಡು ಮೂಲದ ರವಿಯವರು ಪತ್ನಿ ಜೊತೆ ನವಗ್ರಾಮ ಸೈಟಲ್ಲಿ ವಾಸವಾಗಿದ್ದರು. ಇಂದು ಬೆಳಗ್ಗೆ ಪತ್ನಿ ನೀರು ತರಲೆಂದು ಹೊರ ಹೋಗಿದ್ದ ಸಂದರ್ಭ ರವಿ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದರೆನ್ನಲಾಗಿದೆ.
ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





