ಬಾಹುಬಲಿ ವಿರುದ್ಧದ ಪ್ರತಿಭಟನೆ ವಾಪಸ್

ಬೆಂಗಳೂರು, ಎ.22: ಬಾಹುಬಲಿ ವಿರುದ್ಧದ ಪ್ರತಿಭಟನೆಯನ್ನು ಕೈ ಬಿಟ್ಟಿರುವುದಾಗಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್ "ಸತ್ಯರಾಜ್ ಕನ್ನಡ ವಿರೋಧಿ ಹೇಳಿಕೆಗೆ ಕ್ಷಮೆ ಯಾಚಿಸಬೇಕೆಂದು ನಮ್ಮ ಬೇಡಿಕೆಯಾಗಿತ್ತು. ನಿನ್ನೆ ನಟ ಸತ್ಯರಾಜ್ ಹೇಳಿಕೆ ಓದಿದ್ದನ್ನು ನೋಡಿದ್ದೇನೆ. ತಪ್ಪಾಗಿದೆ ವಿಷಾದಿಸುತ್ತೇನೆ ಎಂದು ಸತ್ಯರಾಜ್ ಬಹಿರಂಗವಾಗಿ ಕ್ಷಮೆ ಯಾಚಿಸಿದ್ದಾರೆ. ನಮಗೆ ಯಾರ ಮೇಲೂ ವೈಯಕ್ತಿಕ ದ್ವೇಷವೂ ಇಲ್ಲ. ಸತ್ಯರಾಜ್ ಅವರು ಕ್ಷಮೆ ಯಾಚಿಸಿರುವುದನ್ನು ಪರಿಗಣಿಸಿ ಪ್ರತಿಭಟನೆಯನ್ನು ಕೈ ಬಿಟ್ಟಿರುವುದಾಗಿ ವಾಟಾಳ್ ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಸತ್ಯರಾಜ್ ಬಾಯಿ ಭದ್ರವಾಗಿರಲಿ. ಕನ್ನಡಿಗರ ಬಗ್ಗೆ ಮಾತನಾಡುವಾಗ ಎಚ್ಚರ ವಹಿಸಲಿ ಎಂದು ವಾಟಾಳ್ ಎಚ್ಚರಿಕೆ ನೀಡಿದ್ದಾರೆ.
ತಮಿಳುನಾಡಿನಲ್ಲಿ ಕನ್ನಡ ಚಿತ್ರ ಬಂದ್ ಮಾಡಿದರೆ ಕರ್ನಾಟಕದಲ್ಲೂ ತಮಿಳು ಸಿನಿಮಾ ಬಂದ್ ಮಾಡಲಾಗುವುದು ಎಂದು ವಾಟಾಳ್ ಹೇಳಿದ್ದಾರೆ.
Next Story





