Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಅತ್ಯಾಧುನಿಕ ಕ್ಲಾಸ್ ರೂಮ್ ರೂಪಿಸಲು ತನ್ನ...

ಅತ್ಯಾಧುನಿಕ ಕ್ಲಾಸ್ ರೂಮ್ ರೂಪಿಸಲು ತನ್ನ ಒಡವೆಯನ್ನೇ ಮಾರಿದ ಸರ್ಕಾರಿ ಶಾಲಾ ಶಿಕ್ಷಕಿ !

ವಾರ್ತಾಭಾರತಿವಾರ್ತಾಭಾರತಿ22 April 2017 3:03 PM IST
share
ಅತ್ಯಾಧುನಿಕ ಕ್ಲಾಸ್ ರೂಮ್ ರೂಪಿಸಲು ತನ್ನ ಒಡವೆಯನ್ನೇ ಮಾರಿದ ಸರ್ಕಾರಿ ಶಾಲಾ ಶಿಕ್ಷಕಿ !

ತಮಿಳುನಾಡಿನ ವಿಲ್ಲುಪುರಂ ಪಟ್ಟಣದ ಕಂಧಡು ಎಂಬಲ್ಲಿರುವ ಈ ಶಾಲೆಯ ಮೂರನೇ ತರಗತಿಯ ಇಂಗ್ಲಿಷ್ ತರಗತಿಯಲ್ಲಿ ಇಂಟರ್‌ಆ್ಯಕ್ಟಿವ್ ಸ್ಮಾರ್ಟ್ ಬೋರ್ಡ್, ಬಣ್ಣಬಣ್ಣದ ಪೀಠೋಪಕರಣಗಳು, ಅಂದವಾಗಿ ಜೋಡಿಸಿಟ್ಟಿರುವ....ನೋಡಿದರೆ ಓದಲೇಬೇಕು ಎನ್ನಿಸುವ ಪುಸ್ತಕಗಳು ಇವನ್ನೆಲ್ಲ ಕಂಡರೆ ಯಾವುದೋ ಶ್ರೀಮಂತ ಇಂಟರ್‌ನ್ಯಾಷನಲ್ ಶಾಲೆಯಿರಬೇಕು ಎನ್ನಿಸುವುದು ಸಹಜ. ಆದರೆ ಇದು ಸರಕಾರಿ ಶಾಲೆಯ ತರಗತಿ ಕೋಣೆ ಎಂದರೆ ಯಾರೂ ನಂಬುವುದಿಲ್ಲ !

 ಅಂದ ಹಾಗೆ ಈ ಪಂಚಾಯತ್ ಯೂನಿಯನ್ ಪ್ರಾಥಮಿಕ ಶಾಲೆಯ ಮಕ್ಕಳು ಅರಳು ಹುರಿದಂತೆ ಇಂಗ್ಲಿಷ್ ಮಾತನಾಡುವುದನ್ನು ಕೇಳಿದರೆ ಹುಟ್ಟಿದ ನಂತರ ಮೊದಲು ಕಲಿತಿದ್ದೇ ಇಂಗ್ಲಿಷ್ ಭಾಷೆಯೇನೋ ಎಂದನ್ನಿಸುವುದು ಸುಳ್ಳಲ್ಲ.

 ಅನ್ನಪೂರ್ಣಾ ಮೋಹನ್ ಅವರನ್ನು ತಮ್ಮ ಶಿಕ್ಷಕಿಯಾಗಿ ಪಡೆದಿರುವ ಈ ಮಕ್ಕಳು ನಿಜಕ್ಕೂ ಅದೃಷ್ಟವಂತರು. ಅವರು ತನ್ನ ವಿದ್ಯಾರ್ಥಿಗಳು ಇಂಗ್ಲಿಷ್ ಮೇಲೆ ಪ್ರಭುತ್ವ ಸಾಧಿಸುವಂತೆ ಮಾಡಲು ಕಷ್ಟಪಟ್ಟಿದ್ದು ಮಾತ್ರವಲ್ಲ....ಇಂತಹ ಅತ್ಯಾಧುನಿಕ ತರಗತಿ ಕೋಣೆಯನ್ನು ರೂಪಿಸಲು ತನ್ನ ಸ್ವಂತ ಒಡವೆಗಳನ್ನೇ ಮಾರಾಟ ಮಾಡಿದ್ದಾರೆ.

ಮಕ್ಕಳಿಗೆ ಇಂಗ್ಲಿಷ್ ಉಚ್ಚಾರಣೆಯನ್ನು ಸರಿಯಾಗಿ ಕಲಿಸಲು ತಮಿಳುನಾಡಿನ ಶಿಕ್ಷಕಿಯರಿಗೆ ಅಗತ್ಯ ಸೌಲಭ್ಯಗಳಿಲ್ಲ ಮತ್ತು ಈಗಿರುವ ವ್ಯವಸ್ಥೆ ಬದಲಾಗಬೇಕು ಎನ್ನುವುದನ್ನು ಅನ್ನಪೂರ್ಣಾ ಬಹುಬೇಗ ಅರ್ಥ ಮಾಡಿಕೊಂಡಿದ್ದರು. ತನ್ನ ತರಗತಿಯಲ್ಲಿ ಬೋಧಿಸಲು ಹೆಚ್ಚು ಪರಿಣಾಮಕಾರಿ ಪದ್ಧತಿಗಳನ್ನು ಅನುಷ್ಠಾನಿಸಲು ಅವರು ಆರಂಭಿಸಿದ್ದರು.

ತನ್ನ ತರಗತಿಯಲ್ಲಿ ಇಂಗ್ಲಿಷ್ ಕಲಿಕೆಗೆ ಪೂರಕ ವಾತಾವರಣವನ್ನು ಸೃಷ್ಟಿಸಲು ಅವರು ಪ್ರಯತ್ನಿಸಿದ್ದರು. ತರಗತಿಯ ಆರಂಭದಿಂದ ಅಂತ್ಯದವರೆಗೂ ವಿದ್ಯಾರ್ಥಿಗಳೊಂದಿಗೆ ಇಂಗ್ಲಿಷ್‌ನಲ್ಲಿಯೇ ಅವರು ಮಾತನಾಡುತ್ತಿದ್ದರು. ಆರಂಭದಲ್ಲಿ ಕೆಲವು ಮಕ್ಕಳಿಗೆ ಇದು ಕಬ್ಬಿಣದ ಕಡಲೆಯಾಗಿತ್ತಾದರೂ ಬಹುಬೇಗನೆ ಅವರೂ ಹೊಸ ಅಭ್ಯಾಸಕ್ರಮಕ್ಕೆ ಹೊಂದಿಕೊಂಡಿದ್ದರು.

ಮಕ್ಕಳ ಇಂಗ್ಲಿಷ ಉಚ್ಚಾರಣೆಯನ್ನು ತಿದ್ದಲು ಅವರು ಧ್ವನಿವಿಜ್ಞಾನವನ್ನು ಬಳಸಿಕೊಂಡಿದ್ದರು. ತನ್ಮೂಲಕ ಅಕ್ಷರಗಳನ್ನು ಓದುವುದು ಮತ್ತು ಬರೆಯುವುದು ಹೇಗೆ ಎನ್ನುವುದನ್ನು ಕಲಿಸುವ ಜೊತೆಗೆ ಅವರು ಭಾಷೆಯ ಮೇಲೆ ಹಿಡಿತ ಸಾಧಿಸುವಂತೆ ಮಾಡುವಲ್ಲಿ ಸಫಲರಾಗಿದ್ದರು. ತನ್ನ ವಿದ್ಯಾರ್ಥಿಗಳಿಗೆ ವಾಕ್ಯ ರಚನೆ,ವ್ಯಾಕರಣ ಕೌಶಲ ಇವೆಲ್ಲವೂಗಳನ್ನು ಅವರು ಅರೆದು ಕುಡಿಸಿದ್ದರು.

 ಅನ್ನಪೂರ್ಣಾ ಧ್ವನಿವಿಜ್ಞಾನವನ್ನು ಬಳಸಿ ತನ್ನ ವಿದ್ಯಾರ್ಥಿಗಳಿಗೆ ಬ್ರಿಟಿಷ ಉಚ್ಚಾರಣೆಯಲ್ಲಿ ಪರಿಣಿತರನ್ನಾಗಿಸಿದ್ದಾರೆ. ತಮಿಳುನಾಡಿನಲ್ಲಿ ಶಿಕ್ಷಕರು ಈ ಪದ್ಧತಿಯನ್ನು ಬಳಸುವುದಿಲ್ಲ. ಅವರು ಬಳಸುವುದು ಗಿಳಿಪಾಠದ ಓಬಿರಾಯನ ಕಾಲದ ಪದ್ಧತಿಯನ್ನು ಮತ್ತು ಈ ಪದ್ಧತಿ ವಿದ್ಯಾರ್ಥಿಗಳಲ್ಲಿ ಇಂಗ್ಲಿಷ್‌ನ ಬಗ್ಗೆ ಆಕರ್ಷಣೆಯ ಬದಲಾಗಿ ಭೀತಿಯನ್ನು ಹುಟ್ಟಿಸುತ್ತದೆ.

ಕೆಲವೇ ತಿಂಗಳುಗಳಲ್ಲಿ ವಿದ್ಯಾರ್ಥಿಗಳು ಅನ್ನಪೂರ್ಣಾ ಟೀಚರ್‌ರ ಹೊಸ ಬೋಧನಾ ಪದ್ಧತಿಗಳಿಗೆ ಸಂಪೂರ್ಣವಾಗಿ ಹೊಂದಿಕೊಂಡಿದ್ದರು ಮತ್ತು ಈ ಮಕ್ಕಳು ಇಂಗ್ಲಿಷ್‌ನಲ್ಲಿ ಮಾತನಾಡುವ ವೀಡಿಯೊವೊಂದನ್ನು ಅವರು ತನ್ನ ಫೇಸ್‌ಬುಕ್ ಪೇಜ್‌ನಲ್ಲಿ ಪೋಸ್ಟ್ ಮಾಡಿದ್ದರು. ಸಾವಿರಾರು ಜನರು ಈ ವೀಡಿಯೊವನ್ನು ಶೇರ್ ಮಾಡಿಕೊಂಡಿದ್ದರು ಮತ್ತು ರಾಷ್ಟ್ರಾದ್ಯಂತದಿಂದ ಬೆಂಬಲದ ಹೇಳಿಕೆಗಳು ಹರಿದು ಬಂದಿದ್ದವು. ಅನ್ನಪೂರ್ಣಾ ಇಂತಹ ವೀಡಿಯೊಗಳನ್ನು ಆಗಾಗ್ಗೆ ಪೋಸ್ಟ್ ಮಾಡುತಿದ್ದಂತೆ ಜನರು ಮಕ್ಕಳಿಗಾಗಿ ಹಣ ಮತ್ತು ಉಡುಗೊರೆಗಳನ್ನು ಕಳುಹಿಸಲು ಪ್ರಾರಂಭಿಸಿದ್ದರು. ಕೆನಡಾ ಮತ್ತು ಸಿಂಗಾಪುರದಂತಹ ಸ್ಥಳಗಳಿಂದಲೂ ಈ ಮಕ್ಕಳ ಸಾಧನೆಗಾಗಿ ಪ್ರಶಂಸೆಗಳು ವ್ಯಕ್ತವಾಗಿದ್ದಲ್ಲದೆ, ಬ್ಯಾಡ್ಮಿಂಟನ್ ರ್ಯಾಕೆಟ್‌ಗಳೂ ಉಡುಗೊರೆಯಾಗಿ ಬಂದಿದ್ದವು.

ಇಷ್ಟಾದ ಬಳಿಕ ತನ್ನ ವಿದ್ಯಾರ್ಥಿಗಳಿಗಾಗಿ ತಾನು ಇನ್ನೂ ಏನಾದರೂ ಮಾಡಬೇಕು ಎಂದು ಅನ್ನಪೂರ್ಣಾ ಯೋಚಿಸಿದ್ದರು ಮತ್ತು ಅದಕ್ಕೆ ಈ ಮಕ್ಕಳು ಅರ್ಹರು ಎಂದು ಆಕೆ ಭಾವಿಸಿದ್ದರು.

ಬೇರೊಂದು ದೇಶದ ಅಪರಿಚಿತ ವ್ಯಕ್ತಿಗಳು ತನ್ನ ವಿದ್ಯಾರ್ಥಿಗಳಿಗೆ ಇಷ್ಟೆಲ್ಲ ಮಾಡುತ್ತಿರುವಾಗ ತಾನೂ ತನ್ನ ಕೈಲಾದಷ್ಟು ಕೊಡುಗೆ ನೀಡಲು ಅವರು ನಿರ್ಧರಿಸಿದ್ದರು.

 ಇದೇ ಸಂದರ್ಭದಲ್ಲಿ ಸುದ್ದಿಜಾಲವೊಂದು ಅನ್ನಪೂರ್ಣಾರ ಸಂದರ್ಶನವನ್ನು ಕೋರಿತ್ತು. ಈ ಸಂದರ್ಶನವನ್ನೇ ಒಂದು ನೆಪವಾಗಿಸಿಕೊಂಡು ತನ್ನ ತರಗತಿಯ ಸ್ವರೂಪವನ್ನು ಆಮೂಲಾಗ್ರವಾಗಿ ಬದಲಿಸಲು ಅವರು ನಿರ್ಣಯ ಕೈಗೊಂಡಿದ್ದರು.

ಮುಂದಿನ ಮೂರು ದಿನಗಳಲ್ಲಿ ತನ್ನೆಲ್ಲ ಒಡವೆಗಳನ್ನು ಮಾರಾಟ ಮಾಡಿದ್ದ ಅನ್ನಪೂರ್ಣಾ ತರಗತಿಯಲ್ಲಿ ಡಿಜಿಟಲ್ ಸ್ಮಾರ್ಟ್‌ಬೋರ್ಡ್ ವ್ಯವಸ್ಥೆಯನ್ನು ಸ್ಥಾಪಿಸಿದ್ದರು.ಜೊತೆಗೆ ಹೊಸ ನೆಲವನ್ನು ಮಾಡಿಸಿ ಹೊಸ ಪೀಠೋಪಕರಣಗಳನ್ನು ತರಿಸಿದ್ದರು. ಮಕ್ಕಳಿಗಾಗಿ 5,000ರೂ.ವೌಲ್ಯದ ಪುಸ್ತಕಗಳನ್ನೂ ಖರೀದಿಸಿದ್ದರು.

‘‘ಇದಕ್ಕಾಗಿ ಎಲ್ಲ ಖರ್ಚುಗಳನ್ನೂ ನಾನೇ ಮಾಡಲು ನಿರ್ಧರಿಸಿದ್ದೆ. ಯಾರಿಗೂ ಹೊರೆ ಹೊರಿಸದಿರಲು ನಾನು ಬಯಸಿದ್ದೆ. ಎಲ್ಲ ಖರ್ಚುಗಳನ್ನು ನಾನೇ ಮಾಡಿದ್ದರಿಂದ ಮತ್ತು ಬೇರೆ ಯಾರನ್ನೂ ಅವಲಂಬಿಸುವ ಅಗತ್ಯವಿಲ್ಲದ್ದರಿಂದ ನಾನು ಬಯಸಿದ್ದನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು ಸಾಧ್ಯವಾಗಿತ್ತು ’’ ಎಂದು ಅನ್ನಪೂರ್ಣಾ ವಿವರಿಸಿದರು.

ತನ್ಮಧ್ಯೆ ಸುದ್ದಿಜಾಲದಲ್ಲಿ ಅನ್ನಪೂರ್ಣಾರ ಸಂದರ್ಶನ ಪ್ರಸಾರಗೊಂಡ ಬಳಿಕ ಅವರ ಆಧುನಿಕ ತರಗತಿ ಕೋಣೆ ಇನ್ನಷ್ಟು ಗಮನವನ್ನು ಸೆಳೆದಿತ್ತು. ಅವರಿಗೆ ಮತ್ತು ಅವರ ವಿದ್ಯಾರ್ಥಿಗಳಿಗೆ ನೆರವಾಗಲು ಹಲವಾರು ಜನರು ಮುಂದೆ ಬಂದಿದ್ದರು. ಆರ್ಥಿಕ ನೆರವಿನ ಭರವಸೆಗಳ ಮಹಾಪೂರವೇ ಹರಿದು ಬರುತ್ತಿರುವುದರಿಂದ ಉತ್ತೇಜಿತಗೊಂಡಿರುವ ಅವರು ತನ್ನ ಇಡೀ ಶಾಲೆಯಲ್ಲಿನ ಬೋಧನಾ ಪದ್ಧತಿಗಳನ್ನೇ ಬದಲಿಸುವ ಯೋಜನೆ ಯನ್ನು ಹಮ್ಮಿಕೊಂಡಿದ್ದಾರೆ.

ಸರಕಾರಿ ಶಾಲೆಗಳಲ್ಲಿನ ಬೋಧನಾ ಮಟ್ಟ ಖಾಸಗಿ ಶಾಲೆಗಳಷ್ಟು ಉತ್ತಮವಾಗಿಲ್ಲ ಮತ್ತು ಉಚಿತವಾಗಿ ದೊರೆಯುವ ಶಿಕ್ಷಣಕ್ಕೆ ಪೋಷಕರು ಲಕ್ಷಾಂತರ ರೂ.ಗಳನ್ನು ಪಾವತಿಸುತ್ತಾರೆ. ಸ್ವಲ್ಪವೇ ಪ್ರಯತ್ನದಿಂದ ಸರಕಾರಿ ಶಾಲೆಗಳು ಖಾಸಗಿ ಶಾಲೆಗಳ ದುಬಾರಿ ಶುಲ್ಕ ನೀಡಲು ಸಾಧ್ಯವಾಗದ ಕುಟುಂಬಗಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸುವಂತೆ ಮಾಡಬಹುದು ಎಂದು ಅನ್ನಪೂರ್ಣಾ ಹೇಳಿದರು.

ಕೃಪೆ: thenewsminute.com

share
ವಾರ್ತಾಭಾರತಿ
ವಾರ್ತಾಭಾರತಿ
Next Story
X