ಡಿಜಿಟಲೀಕರಣ: ಎಚ್‌ಡಿಎಫ್‌ಸಿ ಬ್ಯಾಂಕ್ ನಲ್ಲಿ 6,100 ಮಂದಿಗೆ ಉದ್ಯೋಗ ಖೋತ !

ಮುಂಬೈ, ಎ. 22: ಡಿಜಿಟಲ್ ವ್ಯವಹಾರ ಪ್ರೋತ್ಸಾಹಿಸುವ ಪ್ರಯುಕ್ತ ದೇಶದ ಪ್ರಮುಖ ಖಾಸಗಿ ಬ್ಯಾಂಕ್‌ಗಳಲ್ಲಿ ಒಂದಾದ ಎಚ್‌ಡಿಎಫ್‌ಸಿಬ್ಯಾಂಕ್ ತನ್ನ 6,100 ಉದ್ಯೋಗಿಗಳನ್ನು ಕೆಲಸದಿಂದ ಕೈಬಿಡುತ್ತಿದೆ. ಈಗ ಇರುವ ನೌಕರರಲ್ಲಿಶೇ. 7ರಷ್ಟು ಕಡಿಮೆ ಮಾಡುವ ಉದ್ದೇಶವನ್ನು ಅದು ಹೊಂದಿದೆ. 2016ರ ಡಿಸೆಂಬರ್ ತಿಂಗಳಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಒಟ್ಟು 90,421 ನೌಕರರು ಇದ್ದರು. ಈಗ ನೌಕರರ ಸಂಖ್ಯೆಯನ್ನು 84,325ಕ್ಕೆ ಕಡಿಮೆಗೊಳಿಸಲು ಬ್ಯಾಂಕ್ ನಿರ್ಧರಿಸಿದೆ.
ಡಿಜಿಟಲ್ ವ್ಯವಹಾರದಲ್ಲಿ ಭಾರೀ ಹೆಚ್ಚಳ ಆಗಿದೆ. ಈ ಪರಿಸ್ಥಿತಿಯಲ್ಲಿ ಇನ್ನು ಹೆಚ್ಚು ಉದ್ಯೋಗಿಗಳ ಅಗತ್ಯ ವಿರುವುದಿಲ್ಲ ಎಂದು ಎಚ್‌ಡಿಎಫ್‌ಸಿ ಬ್ಯಾಂಕ್ನ ಉಪ ಪ್ರಬಂಧಕರು ತಿಳಿಸಿದ್ದಾರೆ. ಮಾರ್ಚ್‌ನಲ್ಲಿ ಕೊನೆಗೊಂಡ ಆರ್ಥಿಕ ವರ್ಷದ ನಾಲ್ಕನೆ ಚರಣದಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಲಾಭದಲ್ಲಿ ಹೆಚ್ಚಳವಾಗಿತ್ತು. ಶೇ . 18ರಷ್ಟು ಲಾಭವನ್ನು ಅದು ದಾಖಲಿಸಿದೆ. ಡಿಜಿಟಲ್ ವ್ಯವಹಾರದ ಪ್ರಯುಕ್ತ ಹೆಚ್ಚಿನೆಲ್ಲ ಬ್ಯಾಂಕ್‌ಗಳು ತಮ್ಮ ನೌಕರರನ್ನು ಕಡಿಮೆ ಮಾಡಲು ಆರಂಭಿಸಿದರೆ, ಅದು ದೇಶ ಅರ್ಥಿಕ ವ್ಯವಸ್ಥೆ ಮತ್ತು ಕಾರ್ಮಿಕರಿಗೆ ಪ್ರತಿಕೂಲವಾಗಿ ಪರಿಣಮಿಸಲಿದೆ.