ಐ ಲವ್ ಅಝಾನ್ : ಕಂಗನಾ ರಣಾವತ್

ಮುಂಬೈ, ಎ. 22 : ಖ್ಯಾತ ಗಾಯಕ ಸೋನು ನಿಗಮ್ ಅವರು ಅಝಾನ್ ಕುರಿತು ಮಾಡಿದ ಟ್ವೀಟ್ ದೊಡ್ಡ ವಿವಾದಕ್ಕೆ ಕಾರಣವಾಗಿರುವಂತೆಯೇ ಇದೀಗ ಬಾಲಿವುಡ್ 'ಕ್ವೀನ್' ಕಂಗನಾ ರಣಾವತ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ನನಗೆ ಅಝಾನ್ ನಿಂದ ಯಾವುದೇ ಸಮಸ್ಯೆ ಇಲ್ಲ. ಆದರೆ ಸೋನು ಹೇಳಿರುವ ವಿಷಯವನ್ನು ಗೌರವಿಸಿ ಅದರ ಬಗ್ಗೆ ಚರ್ಚಿಸಬೇಕು. ನನಗೆ ಅಝಾನ್ ಅಂದ್ರೆ ಪ್ರೀತಿ. ಐ ಲವ್ ಇಟ್. ನಾನು ಲಖನೌ ದಲ್ಲಿ ಶೂಟಿಂಗ್ ನಲ್ಲಿರುವಾಗಲೂ ಅದನ್ನು ಕೇಳಿ ಖುಷಿ ಪಡುತ್ತಿದ್ದೆ. ಆದರೆ ಅದು ನನ್ನ ಅಭಿಪ್ರಾಯ " ಎಂದು ಕಂಗನಾ ಹೇಳಿದರು.
ಅದು ದೇವಸ್ಥಾನ ಇರಲಿ, ಗುರುದ್ವಾರ ಇರಲಿ - ನನಗೆ ಧಾರ್ಮಿಕ ಕಾರ್ಯಕ್ರಮ, ಸ್ಥಳ ಎಂದರೆ ನನಗಿಷ್ಟ. ನಾನು ಚರ್ಚಿಗೂ ಹೋಗುತ್ತೇನೆ ಎಂದು ಕಂಗನಾ ಹೇಳಿದ್ದಾರೆ.
Next Story





