ಎ.24 : ಎಸ್ ಡಿ ಪಿ ಐ ರಾಷ್ಟ್ರಾಧ್ಯಕ್ಷ ಎ. ಸಯೀದ್ ಉಳ್ಳಾಲಕ್ಕೆ

ಉಳ್ಳಾಲ,ಎ.22: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲೆ ಅಯೋಜಿಸಿರುವ ‘ಭೀತಿ ರಾಜಕೀಯದ ವಿರುದ್ದ ಐಕ್ಯಗೊಳ್ಳೋಣ’ ಎಂಬ ರಾಷ್ಟ್ರೀಯ ಅಭಿಯಾನದ ಅಂಗವಾಗಿ ಎಪ್ರಿಲ್ 24 ರಂದು ಉಳ್ಳಾಲದ ಹಝ್ರತ್ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಮಾವೇಶ ಹಾಗೂ ರ್ಯಾಲಿ ನಡೆಯಲಿದೆ.
ಈ ಸಾರ್ವಜನಿಕ ಸಮಾವೇಶವನ್ನು ಎಸ್ ಡಿ ಪಿ ಐ ರಾಷ್ಟ್ರಾಧ್ಯಕ್ಷ ಎ. ಸಯೀದ್ ಉದ್ಘಾಟಿಸಲಿದ್ದಾರೆ. ಎಸ್ ಡಿ ಪಿ ಐ ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೊಡಾಜೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಎಸ್ ಡಿ ಪಿ ಐ ರಾಜ್ಯಾಧ್ಯಕ್ಷ ಅಬ್ದುಲ್ ಹನ್ನಾನ್, ರಾಷ್ಡೀಯ ಪ್ರ.ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ, ರಾಜ್ಯ ಪ್ರ.ಕಾರ್ಯದರ್ಶಿ ಅಬ್ದುಲ್ ಲತೀಫ್ ಪುತ್ತೂರು, ರಾಜ್ಯ ಕಾರ್ಯದರ್ಶಿಗಳಾದ ಅಬ್ದುಲ್ ಮಜೀದ್ ಕೊಡ್ಲಿಪೇಟೆ, ಅಲ್ಪೋನ್ಸ್ ಫ್ರಾಂಕೋ, ಆಕ್ರಮ್ ಹಸನ್, ಮಂಗಳೂರು ವಿಧಾನಸಭಾಧ್ಯಕ್ಷ ಅಬ್ಬಾಸ್ ಕಿನ್ಯ, ರಿಯಾಝ್ ಪರಂಗಿಪೇಟೆ, ಅತಾವುಲ್ಲ ಜೋಕಟ್ಟೆ, ಕೂಸಪ್ಪ ಮುತಾಂದವರು ಭಾಗವಹಿಸಲಿದ್ದಾರೆ.
2:30ಸಮಾವೇಶದ ಮೊದಲು ಮಧ್ಯಾಹ್ನ ಕ್ಕೆ ತೊಕ್ಕೊಟ್ಟು ಜಂಕ್ಷನ್ ನಿಂದ ಉಳ್ಳಾಲದ ರಾಣಿ ಅಬ್ಬಕ್ಕ ಸರ್ಕಲ್ ವರೆಗೆ ರ್ಯಾಲಿ ನಡೆಯಲಿದೆ ಎಂದು ಮಂಗಳೂರು ವಿಧಾನ ಸಭೆ ಕಾರ್ಯದರ್ಶಿ ಹಾರೀಸ್ ಮಲಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.





