2020ರಲ್ಲಿ ರಸಗೊಬ್ಬರದಲ್ಲಿ ಭಾರತ ಸ್ವಾವಲಂಬಿ: ಅನಂತಕುಮಾರ್

ಮಂಗಳೂರು, ಎ.22: ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಭಾರತ 2020ರ ವೇಳೆಗೆ ರಸಗೊಬ್ಬರದಲ್ಲಿ ಸ್ವಾವಲಂಬಿ ರಾಷ್ಟ್ರವಾಗಿ ಹೊರಹ್ಮೊಮಲಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತ ಕುಮಾರ್ ಹೇಳಿದ್ದಾರೆ.
ನಗರದ ವಿಕಾಸ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ಕಳೆದ ಮೂರು ವರ್ಷಗಳ ಹಿಂದೆ ಗೊಬ್ಬರ ಕೊರತೆಯಿಂದ ಕೃಷಿಕರು ತತ್ತರಿಸಿದ್ದರು. ಕೃಷಿಕರಲ್ಲಿ ಆತಂಕವೂ ಮನೆ ಮಾಡಿತ್ತು. ಅಂತಹ ಸ್ಥಿತಿ ಈಗ ಇಲ್ಲ. ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ರಸಗೊಬ್ಬರ ಉತ್ಪಾನೆಯಾಗುತ್ತಿದ್ದು ಸಾಕಷ್ಟು ಪ್ರಮಾಣದಲ್ಲಿ ಕೃಷಿಕರಿಗೆ ಪೂರೈಸಲಾಗುತ್ತಿದೆ. ನಿಲುಗಡೆಯಾಗಿದ್ದ ಮಂಗಳೂರು ಕೆಮಿಕಲ್ ರ್ಟಿಲೈಸರ್ಸ್, ಮೆಡ್ರಾಸ್ ರ್ಟಿಲೈಸರ್ಸ್ ಲಿಮಿಟೆಡ್ ಸಂಸ್ಥೆಗಳು ಕಾರ್ಯಾರಂಭ ಮಾಡಿರುವುದರಿಂದ ರಸಗೊಬ್ಬರ ಪೂರೈಕೆಯಲ್ಲಿ ಸಮಸ್ಯೆ ಉಂಟಾಗುವುದಿಲ್ಲ ಎಂದವರು ಹೇಳಿದರು.
ಉ.ಕರ್ನಾಟಕದಲ್ಲಿ ರಸಗೊಬ್ಬರ ಕಾರ್ಖಾನೆ ತೆರೆಯುವ ಸಂಬಂಧ ಈಗಾಗಲೇ ಪೂರ್ವಭಾವಿ ಸಿದ್ಧತೆಗಳು ನಡೆದಿವೆ. ರಾಜ್ಯ ಸರಕಾರ ನಾಲ್ಕು ಕಡೆ ಜಾಗಗಳನ್ನು ತೋರಿಸಿದ್ದು, ಕೇಂದ್ರದ ತಂಡ ರಾಜ್ಯದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಜಾಗ ಅಂತಿಮಗೊಂಡ ತತ್‌ಕ್ಷಣ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಸರಕು ಸೇವಾ ತೆರಿಗೆಯ (ಜಿಎಸ್‌ಟಿ) 4 ವಿಧೇಯಕಗಳನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕರಿಸಲಾಗಿದ್ದು, ಜು. 1ರಿಂದ ಜಿಎಸ್‌ಟಿಯು ಜಾರಿಗೊಳ್ಳಲಿದೆ. 21 ತೆರಿಗೆಯ ಬದಲಾಗಿ ಜಿಎಸ್‌ಟಿ ತೆರಿಗೆ ಅನುಷ್ಠಾನಗೊಳಿಸುತ್ತಿದ್ದು, ಇದು ಶತಮಾನದ ಆರ್ಥಿಕ ಕ್ರಾಂತಿ ಎಂದವರು ಹೇಳಿದರು.
ಉತ್ತರ ಭಾರತದ ಪಂಚ ರಾಜ್ಯಗಳ ಚುನಾವಣಾ ಲಿತಾಂಶವು ಬಿಜೆಪಿಗೆ ಸಿಕ್ಕ ಸಕಾರಾತ್ಮಕ ಜನಾದೇಶ ಎಂದ ಅವರು, ಮುಂದೆ ನಡೆಯುವ ಗುಜರಾತ್, ಹಿಮಾಚಲ ಪ್ರದೇಶ, ಕರ್ನಾಟಕ, ಮಧ್ಯಪ್ರದೇಶ, ರಾಜಸ್ತಾನ, ಚತ್ತೀಸ್‌ಘಡ್ ವಿಧಾನಸಭಾ ಚುನಾವಣೆಗೆ ಸಿದ್ಧತೆ ನಡೆಯುತ್ತಿದೆ. ಈಗಾಗಲೇ 17 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು, ಜನ ಮೋದಿ ಮಾದರಿಯ ಅಭಿವೃದ್ಧಿಯನ್ನು ಬಯಸುತ್ತಿದ್ದಾರೆ ಎಂಬುದಕ್ಕೆ ಇದು ಸ್ಪಷ್ಟ ನಿದರ್ಶನ ಎಂದು ಅನಂತ ಕುಮಾರ್ ತಿಳಿಸಿದರು.
ಸಿಎಂ ಸಿದ್ಧರಾಮಯ್ಯರಿಂದ ಹಗಲುಕನಸು
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಗಲುಕನಸು ಕಾಣುತ್ತಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಗೆಲುವು ದಾಖಲಿಸಲಿದೆ. ಕಾಂಗ್ರೆಸ್ ಪಕ್ಷದಲ್ಲಿಯೇ ಭಿನ್ನಮತ ಮೂಡಿದ್ದು, ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿಯವರ ಪ್ರಶ್ನೆಗಳಿಗೆ ಕಾಂಗ್ರೆಸ್‌ನಲ್ಲಿ ಉತ್ತರವಿಲ್ಲವಾಗಿದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.
ಕೊಚ್ಚಿನ್‌ನಿಂದ ಎಂಸಿಎ್ಗೆ ಗ್ಯಾಸ್ ಪೈಪ್‌ಲೈನ್ ಅಳವಡಿಕೆ ಸಂಬಂಧ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅನಂತ್‌ಕುಮಾರ್, ಈ ಪೈಪ್‌ಲೈನ್ ಅಳವಡಿಸುವ ಸಂಬಂಧ ಈಗಾಗಲೇ ಗ್ಯಾಸ್ ಅಥಾರಿಟಿ ಆ್ ಇಂಡಿಯಾದಿಂದ ಸಂಪೂರ್ಣ ಸರ್ವೇ ಮಾಡಿ ಟೆಂಡರ್ ಕೂಡಾ ಆಗಿದೆ. ಆದರೆ ಮಲಪ್ಪುರಂ ಜಿಲ್ಲೆಯಲ್ಲಿ ರೈಟ್ ಆ್ ವೇ ದೊರಕಲು ಬಾಕಿ ಇದ್ದು, ದೊರೆತ ತತ್‌ಕ್ಷಣ ಕೆಲಸ ಆರಂಭವಾಗಲಿದೆ. ಈ ಸಂಬಂಧ ಕೇರಳ ಸರಕಾರಕ್ಕೆ ಕೇಂದ್ರದ ಸಚಿವಾಲಯದಿಂದ ವಿನಂತಿ ಮಾಡಲಾಗಿದ್ದು, ಮುಂದಿನ ಒಂದೂವರೆ ವಷಗರ್ಳಲ್ಲಿ ಪೂರ್ಣಗೊಳ್ಳಲಿದೆ ಎಂದರು.
ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ದರ್ಜೆಯ ಸ್ಥಾನಮಾನ ನೀಡುವ ಸಂಬಂಧ ಮಾಡಲಾದ ಸಂವಿಧಾನದ 127ನೇ ತಿದ್ದುಪಡಿಗೆ ಕಾಂಗ್ರೆಸ್ ಮತ್ತು ವಿಪಕ್ಷಗಳು ಅಡ್ಡಿಯಾಗಿವೆ ಎಂದು ಸಚಿವ ಅನಂತ್‌ಕುಮಾರ್ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಆರೋಪಿಸಿದರು.
ತಿದ್ದುಪಡಿಗೆ 373 ಸದಸ್ಯರು ಬೆಂಬಲ ವ್ಯಕ್ತಪಡಿಸಿ, ಲೋಕಸಭೆಯಲ್ಲಿ ಮಂಜೂರಾಗಿತ್ತು. ಆದಾಗ್ಯೂ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಮತ್ತು ವಿಪಕ್ಷಗಳು ಅದನ್ನು ತಡೆಹಿಡಿಯುವ ಮೂಲಕ ಹಿಂದುಳಿದ ವರ್ಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀುವುದಕ್ಕೆ ಅಡ್ಡಿಯಾಗಿದ್ದಾರೆ ಎಂದರು.
ಸಚಿವ ರಮೇಶ್ ಜಿಣಜಿಣಗಿ, ಸಂಸದ ನಳಿನ್‌ಕುಮಾರ್ ಕಟೀಲು, ವಿಧಾನ ಪರಿಷತ್ ವಿಪಕ್ಷದ ಮುಖ್ಯ ಸಚೇತಕ ಕ್ಯಾ.ಗಣೇಶ್ ಕಾರ್ಣಿಕ್, ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಉಪಸ್ಥಿತರಿದ್ದರು.
ಎಪ್ರಿಲ್‌ನಿಂದಲೇ ಅನುದಾನ ವಿನಿಯೋಗ
ಈ ಬಾರಿ ಅಧಿವೇಶನದಲ್ಲಿ ಮಂಡಿಸಿದ ಮುಂಗಡ ಪತ್ರ ಸ್ವತಂತ್ರ ಭಾರತದ ಇತಿಹಾಸದಲ್ಲೇ ಸುವರ್ಣಾಕ್ಷರದಲ್ಲಿ ಬರೆದಿಡುವಂತದ್ದಾಗಿದೆ. ಈ ಹಿಂದಿನ ಮುಂಗಡ ಪತ್ರ ಜೂನ್‌ನಲ್ಲಿ ಮಂಜೂರಾಗಿ ಜುಲೈನಲ್ಲಿ ಜಾರಿಗೆ ಬಂದು, ಆಗಸ್ಟ್‌ನಲ್ಲಿ ಕಾರ್ಯಾರಂಭ ಮಾಡುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಎಲ್ಲಾ ಕಾರ್ಯಕಲಾಪ ಮಾ. 31ಕ್ಕೇ ಮುಕ್ತಾಯವಾಗಿ ಎಪ್ರಿಲ್ 1ರಿಂದ ಜಾರಿಗೆ ಬಂದಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತ ಕುಮಾರ್ ಹೇಳಿದ್ದಾರೆ.







